ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ ನೋಡಬನ್ನಿ: ಮಲೆನಾಡಿನಲ್ಲಿ ಮಲ್ಲಿಗೆ ಕಂಪಿನಲ್ಲಿ ಘಮಘಮಿಸುವ ಕಾಫಿ ಹೂವು
23/03/2022, 09:28
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪ್ರಕೃತಿ ಅನ್ನುವುದೇ ಒಂದು ಅದ್ಭುತ.ಅಲ್ಲಿನ ಗಿಡಮರಗಳು, ಪ್ರಾಣಿ ಪಕ್ಷಿಗಳು, ಪ್ರಕೃತಿಯಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ.
ಮಲೆನಾಡಿನಲ್ಲಿ ಮಳೆಯಿಂದಾಗಿ ಹಾಗೂ ಕಾಫಿ ಗಿಡಕ್ಕೆ ನೀರನ್ನು ಸ್ಪ್ರಿಂಕ್ಲರ್ ಮೂಲಕ ಕೊಡುವುದರಿಂದ ಮಾರ್ಚ್ ತಿಂಗಳಲ್ಲಿ ಎಲ್ಲಿ ನೋಡಿದರೂ ಘಮಘಮಿಸುವ ಕಾಫಿ ಹೂವು.
ಇವತ್ತು ಬೆಳಿಗ್ಗೆ ತೋಟಕ್ಕೆ ಹೋದಾಗ ನಮ್ಮ ತೋಟದಲ್ಲಿ ಆದ ಕಾಫಿ ಹೂವು, ಎಲ್ಲಿ ನೋಡಿದರೂ ಮಲ್ಲಿಗೆಯಂತೆ ಅರಳಿನಿಂತ ಕಾಫಿ ಹೂವು, ಸಾವಿರಾರು ಜೇನುಹುಳುಗಳ ಪರಾಗಸ್ಪರ್ಶ ,ಕಾಫಿ ಹೂವಿಗೆ ಜೇನು ಹುಳಗಳ ಸಂಭ್ರಮವನ್ನು ನೋಡುವುದೇ ಒಂದು ಆನಂದ ಸುಮಾರು ಅರ್ಧ ಕಿಲೋಮೀಟರ್ ಕಾಫಿ ಹೂವಿನ ಪರಿಮಳ, ಹೂವಿನ ಮೇಲೆ ಇಬ್ಬನಿಯ ಸ್ಪರ್ಶ ,ಎಲ್ಲೆಡೆ ಹಕ್ಕಿಗಳ ನಾದ ನೋಡಬನ್ನಿ ಮಲೆನಾಡಿನಲ್ಲಿ ಮಲ್ಲಿಗೆ ಪರಿಮಳದ ಘಮಘಮಿಸುವ ಕಾಫಿ ಹೂವು , ಮಧುವನ್ನು ಹೀರಲು ಬರುವ ಜೇನುಹುಳ ಗಳನ್ನು ನೋಡುವುದೇ ಒಂದು ಹಬ್ಬ. ಎಂತಹವರನ್ನು ಮೂಕವಿಸ್ಮಯ ನಾಗಿ ಮಾಡುತ್ತದೆ.