ಇತ್ತೀಚಿನ ಸುದ್ದಿ
ಕೋಟ: ಜೀವನದಲ್ಲಿ ಜಿಗುಪ್ಸೆ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
01/11/2022, 22:49
ಕುಂದಾಪುರ(reporterkarnataka.com): ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟದಲ್ಲಿ ನಡೆದಿದೆ.
ಮೃತರನ್ನು ಕೋಟ ನಿವಾಸಿ ಪ್ರಕಾಶ್ ಮೊಗವೀರ(35) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಹಾಗೂ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು 10 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು.ಇದೇ ವಿಚಾರದಲ್ಲಿ ಮನನೊಂದು ಅ.30ರ ರಾತ್ರಿಯಿಂದ ಅ.31ರ ಮುಂಜಾನೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














