ಇತ್ತೀಚಿನ ಸುದ್ದಿ
ಕೊಪ್ಪ: ವಿದ್ಯುತ್ ತಂತಿ ತುಳಿದು 5 ಹಸುಗಳು ದಾರುಣ ಸಾವು; ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಯರ್
26/09/2024, 20:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿದ್ಯುತ್ ತಂತಿ ತುಳಿದು 5 ಹಸು ಸಾವನ್ನಪ್ಪಿದ ದಾರುಣ ಘಟನೆ ಕೊಪ್ಪ ತಾಲೂಕಿನ ಹಿರೇಗದ್ದೆ ಸಮೀದ ನೇತ್ರಕೊಂಡ ಗ್ರಾಮದಲ್ಲಿ ನಡೆದಿದೆ. ಗಾಳಿ-ಮಳೆಗೆ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಜಾನುವಾರುಗಳು ಸಾವನ್ನಪ್ಪಿವೆ. ಮೂವರು ರೈತರಿಗೆ ಸೇರಿದ 5 ಹಸುಗಳು ಇದಾಗಿವೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಸೂಕ್ತ ಪರಿಹಾರ ನೀಡುವಂತೆ ಹಸು ಕಳೆದುಕೊಂಡ ರೈತರ ಆಗ್ರಹಿಸಿದ್ದಾರೆ.