ಇತ್ತೀಚಿನ ಸುದ್ದಿ
ಕೊಪ್ಪ: ಧರೆ ಕುಸಿತದ ಭೀತಿಯಲ್ಲಿದ್ದ ಕುಟುಂಬಗಳು ಸೇರಿದಂತೆ 57 ಕುಟುಂಬಗಳಿಗೆ ನಿವೇಶನ ಹಂಚಿಕೆ
31/05/2025, 19:44
ಶಶಿ ಬೆತ್ತದಕೊಳಲು ಕೊಪ್ಪ
info.reporterkarnataka@gmail.com
ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯಲ್ಲಿ ನಿವೇಶನಗಳಿಗೆ ಜಾಗ ಹಂಚಿಕೆಗಾಗಿ ಇಂದು ವಿಶೇಷ ಗ್ರಾಮಸಭೆಯನ್ನು ಗ್ರಾಮ ಪಂಚಾಯತಿ ಸಂಭಾಗಣದಲ್ಲಿ ನಡೆಸಲಾಯಿತು.
ಗುಡ್ಡೆತೋಟದ ಧರೆ ಕುಸಿತದ ಭೀತಿಯಲ್ಲಿದ್ದ ಕುಟುಂಬಗಳು ಸೇರಿದಂತೆ ಸುಮಾರು 57 ಫಲಾನುಭವಿಗಳಿಗೆ ನಿವೇಶನಕ್ಕಾಗಿ ಜಾಗಗಳನ್ನು ಹಂಚಲಾಯಿತು.
ಗುಡ್ಡೆತೋಟ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಧರೆ ಕುಸಿತದ ಭೀತಿಯಲ್ಲಿದ್ದ 8 ಕುಟುಂಬಗಳಿಗೆ ಗುಡ್ಡೆತೋಟದ 153 ಸರ್ವೆ ನಂ ನಲ್ಲಿ ಮತ್ತು 5 ಕುಟುಂಬಗಳಿಗೆ ಭೈರೆದೇವರು ಗ್ರಾಮದ ಸರ್ವೆ ನಂ 189ರಲ್ಲಿ ನಿವೇಶನಕ್ಕೆ ಸೂಕ್ತ ಜಾಗ ಹಂಚಿಕೆ ಮಾಡಲಾಗಿದೆ.
ಗ್ರಾಮಸಭೆಯಲ್ಲಿ ವಸತಿ ಮಾರ್ಗದರ್ಶಿ ಅಧಿಕಾರಿ ಓಂಕಾರಮೂರ್ತಿ, ಗ್ರಾಮ ಪಂಚಾಯತಿ ಪಿಡಿಓ ಶೋಭಾ ಹೆಚ್ ಎಸ್, ಹಾಗೂ ಗ್ರಾಮ ಪಂಚಾಯತಿ ಸದ್ಯಸರುಗಳು, ಸಿಬ್ಬಂಧಿಗಳು ಮತ್ತು ಗ್ರಾಮಸ್ಥರು ಇದ್ದರು.














