ಇತ್ತೀಚಿನ ಸುದ್ದಿ
ಕೋಲಾರದ ಕ್ಲಾಕ್ ಟವರ್ ನಲ್ಲಿ ರಾಷ್ಟ್ರಧ್ವಜ ಹಾರಾಟ: 74 ವರ್ಷಗಳ ಕನಸು ಕೊನೆಗೂ ಕನಸು; ಸಂಸದ ಸಂತಸ
20/03/2022, 09:55
ಕೋಲಾರ(reporterkarnataka.com): ನಗರದ ಕ್ಲಾಕ್ ಟವರ್ ನಲ್ಲಿ ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜದ ಹಾರಾಟದಿಂದ ಜಿಲ್ಲೆಯಲ್ಲಿ 74 ವರ್ಷಗಳ ಬಹುದಿನಗಳ ಪ್ರಯತ್ನ, ಹೋರಾಟ ಮತ್ತು ಕನಸು ಇಂದು ನನಸಾಗಿದೆಯೆಂದು ಸಂಸದ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತಾನಾಡಿದ ತ್ರಿವರ್ಣ ಧ್ವಜ ಹಾರಿಸಲು ಪರೋಕ್ಷವಾಗಿ ಪ್ರತ್ಯಕ್ಷವಾಗಿ ಸಹಾಕರ ನೀಡಿದ ರಾಜ್ಯ ಸರ್ಕಾರ, ಜಿಲ್ಲಾ ಪೊಲೀಸ್ ಇಲಾಖೆಗೆ, ಜಿಲ್ಲಾಡಳಿತಕ್ಕೆ ಹಾಗೂ ನಗರಸಭೆ ಸಿಬ್ಬಂದಿಗೆ ಮತ್ತು ಸಹಕರಿಸಿದ ಎಲ್ಲಾ ಧರ್ಮದ ನಾಗರಿಕರಿಗೆ ಧನ್ಯವಾದಗಳನ್ನು ತಿಳಿಸಿದರಲ್ಲದೆ, ನಾವೆಲ್ಲರೂ ಭಾರತೀಯರು ಎಂಬುದನ್ನು ಮೊದಲು ಅರಿತು ಪ್ರತಿಯೊಬ್ಬರೂ ನಡೆಯ ಬೇಕೆಂದರು.
ಭಾರತೀಯರಾಗಿ ನಾವು ದೇಶಕ್ಕೆ ಮೊದಲು ಗೌರವ ಸೂಚಿಸುವುದನ್ನು ನಾವೆಲ್ಲರೂ ಕಲಿಯಬೇಕು, ರಾಜಕಾರಣಿಗಳು ಬಂದು ಹೋಗುತ್ತಾರೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಸೌಹಾರ್ದತೆ ಮುಖ್ಯ ಮುಂದೆಯೂ ಇದೇ ರೀತಿ ನಾವೆಲ್ಲರೂ ಒಂದಾಗಿ ಜೀವನ ಮಾಡೋಣ.ಯಾವುದೇ ಜನಾಂಗದವರಿಗೆ ನೋವು ಮಾಡುವ ಉದ್ದೇಶ ನಮಗಿಲ್ಲ,ಕ್ಲಾಕ್ ಟವರ್ ನ ಇತಿಹಾಸ ನನಗೆ ಮಾಹಿತಿ ಇದೆ.ನಾನು ಕೋಲಾರದಲ್ಲಿ ಇದ್ದರೂ
ವಿನಾಕಾರಣ ನಾನು ಸ್ಥಳಕ್ಕೆ ಆಗಮಿಸಿ ಗೊಂದಲ ಸೃಷ್ಟಿ ಮಾಡಲು ಅವಕಾಶ ನೀಡದೆ ಎಲ್ಲಾ ಮಾಹಿತಿ ಪಡೆಯುತ್ತಿದ್ದೆ ಎಂದು ತಿಳಿಸಿದರು.
ಯಾವುದೇ ಕೋಮಿಗೆ ನೋವು ಉಂಟು ಮಾಡದೆ,ಜಿಲ್ಲೆಯಲ್ಲಿ ಯಾರು ಪಟಾಕಿ ಸಿಡಿಸುವುದು, ವಿಜೋಯೋತ್ಸವ ನಡೆಸುವುದು ಮತ್ತು ಇನ್ನೊಂದು ಧರ್ಮವನ್ನು ಟೀಕಿಸುವುದು, ಪ್ರಚೋದನೆ ಮಾಡದೆ ಎಲ್ಲರೂ ಶಾಂತಿಯುತವಾಗಿ ನಡೆದುಕೊಳ್ಳಬೇಕೆಂದು ಸಂಸದರು ಸಾರ್ವಜನಿಕರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಕೆ.ಯು.ಡಿ.ಎ.ಅಧ್ಯಕ್ಷ ಓಂ ಶಕ್ತಿ ಚಲಪತಿ, ಬಿ.ಜೆ.ಪಿ.ಪಕ್ಷದ ಮುಖಂಡರುಗಳಾದ ತಿಮ್ಮರಾಯಪ್ಪ,ವಿಜಯ ಕುಮಾರ್,ಬಾಲಾಜಿ,ಕೆಂಬೋಡಿ ನಾರಾಯಣ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.