ಇತ್ತೀಚಿನ ಸುದ್ದಿ
ಕೊಂಡಂಗೇರಿ ಮಹಿಳೆಗೆ ಹಲ್ಲೆ ನಡೆಸಿ ಸರ ಕಳ್ಳತನ ಪ್ರಕರಣ: ಆರೋಪಿ ಮೇಲೆ ಹಲ್ಲೆ ಮಾಡಿದವರ ವಿರುದ್ದ ದೂರು
24/07/2025, 17:29

ಮಡಿಕೇರಿ(reporterkarnataka.com): ಕೊಂಡಂಗೇರಿ ಪರಂಬು ಗ್ರಾಮದಲ್ಲಿ ಮಹಿಳೆಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಆರೋಪಿ ಪಾಲಿಬೆಟ್ಟದ ಮುನವ್ವರ್ ಮೇಲೆ ಹಲ್ಲೆ ನಡಿಸಿದವರ ವಿರುದ್ದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಮ
ಕಳೆದ ಸೋಮವಾರ ನಡೆದ ಘಟನೆಯಲ್ಲಿ ಮುನ್ನವ್ವರ್ (26) ಎಂಬಾತನನ್ನು ಗ್ರಾಮಸ್ಥರು ಹಾಲುಗುಂದ ತೋಟವೊಂದರಲ್ಲಿ ಸೆರೆ ಹಿಡಿದು 25-30 ಮಂದಿ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಮುನ್ನವ್ವರ್ ಸಹೋದರ ಮನ್ಸೂರ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.