ಇತ್ತೀಚಿನ ಸುದ್ದಿ
ಕೊಣಾಜೆ: ತೆಂಗಿನ ಕಾಯಿ ಕೀಳಲು ಬಂದ ಯುವಕನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
13/12/2022, 18:47

ಉಳ್ಳಾಲ(reporterkarnataka.com): ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೆಂಗಿನಕಾಯಿ ಕೀಳಲೆಂದು ಬಂದ ಯುವಕನೊಬ್ಬ ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ತೆಂಗಿನ ಕಾಯಿ ಕೀಳುವ ಕೆಲಸ ಮಾಡುತ್ತಿದ್ದ ಮಂಜನಾಡಿ ನಿವಾಸಿ ಬಶೀರ್(28) ಎಂಬಾತ ಬಂಧಿತ ಯುವಕ.ಬಶೀರ್
ಬಾಲಕಿಯ ಮನೆಮಂದಿಗೆ ಪರಿಚಿತನಾಗಿದ್ದ. ಈತ ಸೋಮವಾರದಂದು ಮಧ್ಯಾಹ್ನದ ವೇಳೆ ತೆಂಗಿನಕಾಯಿ ತೆಗೆಯುವುದಾಗಿ ಹೇಳಿಕೊಂಡು ಬಂದಿದ್ದು, ಈ ವೇಳೆ ಬಾಲಕಿ ಒಂಟಿಯಾಗಿರುವುದನ್ನು ಕಂಡು ಮನೆಯೊಳಗಿದ್ದ ಬಾಲಕಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಎಳೆದಿದ್ದ ಎನ್ನಲಾಗಿದೆ. ಕೂಡಲೇ ಬಾಲಕಿ ಕಿರುಚಾಡಲು ಆರಂಭಿಸಿದ್ದಾಳೆ ಎನ್ನಲಾಗಿದೆ. ಮಾಹಿತಿ ತಿಳಿದ ಸ್ಥಳೀಯರು ಮನೆಯತ್ತ ಆಗಮಿಸಿ ಬಶೀರ್ ನನ್ನು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.