10:10 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಕೋಲಾರ: ಪವರ್ ಟ್ರಾನ್ಸ್‌ಫಾರ್ಮರ್ ನಲ್ಲಿ ಆಗ್ನಿ ಅನಾಹುತ; ಮುಗಿಲೇರಿದ ಬೆಂಕಿಯ ಧಗೆ, ಕಗ್ಗತ್ತಲಿನಲ್ಲಿ ಇಡೀ ನಗರ

03/07/2021, 20:13

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com 

ಇಡೀ ಜಿಲ್ಲೆಗೆ ವಿದ್ಯುತ್ ಪೂರೈಸುವ ಕೆಪಿಟಿಸಿಎಲ್‌ನ ೨೨೦ ಕೆಎ.ಸ್ಟೇಷನ್‌ನ ೧೧೦ ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‌ಫಾರ್ಮರ್ ಆಕಸ್ಮಿಕವಾಗಿ ಆಗ್ನಿಗೆ ಆಹುತಿಯಾಗಿ ದಟ್ಟ ಹೊಗೆ ತುಂಬಿದ್ದು, ಸುಮಾರು ೫ ಕೋಟಿಗೂ ನಷ್ಟ ಸಂಭವಿಸಿದೆ.

ದಟ್ಟ ಹೊಗೆ ಆಕಾಶದೆತ್ತರಕ್ಕೆ ಆವರಿಸಿದ್ದು , ಜಿಲ್ಲಾದ್ಯಂತ ಕರೆಂಟ್ ಕಟ್ ಆಗಿದೆ. ನಗರದ ಹಾರೋಹಳ್ಳಿ ಸಮೀಪ ಇರುವ ಕೆಪಿಟಿಸಿಎಲ್‌ನ ೨೨೦ ಕೆವಿ ಸ್ಟೇಷನ್‌ನಲ್ಲಿ ಈ ದುರಂತ ಸಂಭವಿಸಿದ್ದು , ೬೬ ಕೆವಿ ಬುಸ್ಟಿಂಗ್ ಪ್ಲಾಷ್‌ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಹರಡಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಹೇಳುವಂತೆ ಈ ಟ್ರಾನ್ಸ್‌ಫಾರರ್‌ನಲ್ಲಿ ೩೯ ಸಾವಿರ ಲೀಟರ್ ಓಸೀಲ್‌ ಆಯಿಲ್ ತುಂಬಿರುವುದರಿಂದ ಬೆಂಕಿ ನಂದಿಸಲು ಕಷ್ಟವಾಗಿದ್ದು , ದಟ್ಟಹೊಗೆ ಆಕಾಶದೆತ್ತರಕ್ಕೆ ಆವರಿಸುವ ಮೂಲಕ ಕೆಲಕಾಲ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು . ನೂರಾರು ಜನ ಕೆಪಿಟಿಸಿಎಲ್ ಸ್ಟೇಷನ್‌ನತ್ತ ಧಾವಿಸಿದ್ದು , ದಟ್ಟಹೊಗೆಯ ತೀವ್ರತೆ ಕಂಡ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳಿಗೂ ವ್ಯಾಪಿಸುವುದೇ ಎಂಬ ಆತಂಕ ಹೊರಹಾಕಿದರಾದರೂ , ಇದು ಟ್ರಾನ್ಸ್‌ಫಾರರ್‌ನಲ್ಲಿನ ಆಯಿಲ್‌ಗೆ ಹೊತ್ತಿಕೊಂಡಿರುವ ಬೆಂಕಿಯಾಗಿದ್ದು , ಅಕ್ಕಪಕ್ಕ ವ್ಯಾಪಿಸದು ಎಂದು ಅಧಿಕಾರಿಗಳು

ಸ್ಪಷ್ಟಪಡಿಸಿದರು. ಅಗ್ನಿಶಾಮಕ ದಳದ ವಾಹನಗಳು ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಆಯಿಲ್‌ನ ಕಾರಣವಾಗಿ ದಟ್ಟಹೊಗೆ ಮುಗಿಲೆತ್ತರಕ್ಕೆ ಹರಡುತ್ತಿದ್ದಂತೆ ೪ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು , ಸುಮಾರು ೪ ಗಂಟೆಗಳ ಕಾಲ ಸತತ ಪ್ರಯತ್ನದಿಂದ ಅಗ್ನಿಯನ್ನು ಆರಿಸಲಾಗಿದ್ದು , ಹೊಗೆ ಆವರಿಸಿತ್ತು. ಕೊವಿಚ್‌ನಿಂದಾಗಿ ಸರ್ವೀಸ್ ಮಾಡಿಲ್ಲ ಟ್ರಾನ್ಸ್ಫರರ್‌ಅನ್ನು ಪ್ರತಿ ೩ ತಿಂಗಳಿಗೊಮ್ಮೆ ಸರ್ವೀಸ್ ಮಾಡಬೇಕಾಗಿದ್ದು , ಇತ್ತೀಚೆಗೆ ಕೋವಿಡ್‌ನಿಂದ ಆಸ್ಪತ್ರೆಗಳಿಗೆ ಸತತ ೨೪ ಗಂಟೆ ಕರೆಂಟ್ ಒದಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಒಂದೂವರೆವರ್ಷದಿಂದ ಸರ್ವೀಸ್ ಮಾಡಿರಲಿಲ್ಲ ಎಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಾಥ್ ತಿಳಿಸಿದರು. 

ಕೋಲಾರ ಜಿಲ್ಲೆ ಪೂರ್ತಿ ಕಗ್ಗತ್ತಲಲ್ಲಿ ಕೆಪಿಟಿಸಿಎಲ್‌ನ ೨೨೦ ಕೆವಿ.ಸೇಷನ್‌ನ ೧೦೦ ಎಂ.ವಿ.ಎ ಪವರ್ ಟ್ರಾನ್ಸ್‌ಫಾರ‌ ಸುಟ್ಟುಹೋಗಿರುವ ಕಾರಣ ಬೇರೆ ಕಡೆಗಳಿಂದ ವಿದ್ಯುತ್ ಸರಬರಾಜಿಗೆ ಕ್ರಮವಹಿಸಲು ಮಧ್ಯರಾತ್ರಿವರೆಗೂ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ ಎಂದು ಇಇ ಅವರು ತಿಳಿಸಿದರು . ಇಡೀ ಜಿಲ್ಲೆಯಲ್ಲಿ ಮಧ್ಯರಾತ್ರಿವೇಳೆಗೆ ಕರೆಂಟ್ ಬರುವ ಸಾಧ್ಯತೆ ಇದ್ದು , ಅಧಿಕಾರಿಗಳು , ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ , ಜನತೆಯ ಸಹಕಾರವೂ ಬೇಕು ಎಂದರು . 

ಲಭ್ಯ ಮೂಲಗಳಿಂದ ಮಧ್ಯರಾತ್ರಿವೇಳೆಗೆ ಕರೆಂಟ್ ಒದಗಿಸಲು ಇಲಾಖೆ ಇಂಜಿನಿಯರ್‌ಗಳು , ಸಿಬ್ಬಂದಿ ಹರಸಾಹಸ ಪಡುತ್ತಿದ್ದು , ಅಗ್ನಿಶಾಮಕ ಸಿಬ್ಬಂದಿಯ ಸಕಾಲಕ ಕ್ರಮದಿಂದಾಗಿ ಪಕ್ಕದಲ್ಲೇ ಇದ್ದ ಮತ್ತೊಂದು ಟ್ರಾನ್ಸ್‌ಫಾರರ್‌ ಉಳಿದುಕೊಂಡಿದೆ . ಸ್ಥಳಕ್ಕೆ ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು , ಅಗ್ನಿ ಅನಾಹುತಕ್ಕೆ ಕಾರಣಗಳನ್ನು ಪತ್ತೆಹಚ್ಚುವುದರ ಜತೆಗೆ ಜಿಲ್ಲೆಗೆ ಕರೆಂಟ್ ಶೀಘ್ರ ಒದಗಿಸುವ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು