ಇತ್ತೀಚಿನ ಸುದ್ದಿ
Kolara | ಮಹಾಶಿವರಾತ್ರಿ: ದಿಂಬಾಲ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ
26/02/2025, 22:51

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಶ್ರೀನಿವಾಸಪುರ ತಾಲೂಕಿನ ದಿಂಬಾಲ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.
ಗ್ರಾಮದಲ್ಲಿ ಸತತವಾಗಿ ಸುಮಾರು 5 ವರ್ಷಗಳಿಂದ ಅಚರಣೆ ಮಾಡಿಕೊಂಡು ಬರುತ್ತಿದ್ದು ಹಬ್ಬವನ್ನು ಸಡಗರ ಸಂಭ್ರಮಗಳೊಂದಿಗೆ ಅಚರಣೆ ಮಾಡಲಾಯಿತು.ಈ ವೇಳೆ ಮಾತನಾಡಿದ ಪಿ.ಎಲ್.ಡಿ ಬ್ಯಾಂಕ್ ಅದ್ಯಕ್ಷ ದಿಂಬಾಲ್ ಅಶೋಕ್ ಅವರು ನಮ್ಮ ಗ್ರಾಮದಲ್ಲಿ ಎಲ್ಲಾ ಗ್ರಾಮಸ್ಥರು ಸೇರಿ ಹಬ್ಬದಂತೆ ರಂಗೋಲಿ ಸ್ಪರ್ಧೆ ಅಚರಣೆ ಮಾಡಿಕೊಂಡು ಬರುತ್ತಿದ್ದು ಮಕ್ಕಳಿಗೆ ಹಲವು ರೀತಿಯ ಆಟಗಳು, ಮಹಿಳೆಯರಿಗೆ ಹಗ್ಗ ಜಗ್ಗಾಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು.ಮನೆ ಮನೆಗೂ ಎಲ್ಲಾ ಗ್ರಾಮಸ್ಥರು ಅಗಮಿಸಿ ಆಟಗಳಲ್ಲಿ ಪಾಲ್ಗೋಂಡು ಹಬ್ಬದಂತೆ ಸಂಭ್ರಮಿಸುತ್ತಾರೆ ಎಂದರು.
ಡಾ. ವೆಂಕಟಾಚಲ ಮಾತನಾಡಿ ರಂಗೋಲಿ ಅನ್ನೊದು ಪೂರ್ವಿಕರ ಅನಾದಿ ಕಾಲದಿಂದ ಮುಂದುವರೆಸಿಕೊಂಡು ಬಂದಿದ್ದು ರಂಗೋಲಿ ಹಾಕುವುದರಿಂದ ಮನಸ್ಸಿಗೆ ನೆಮ್ಮದಿ ಜ್ಞಾಪಕ ಶಕ್ತಿ.ದೈಹಿಕವಾದ ಖಾಯಿಲೆಗಳು ದೂರ. ಏಕಾಗ್ರತೆ ಇನ್ನು ಹಲವು ಉಪಯೋಗಗಳು ಇವೆ ಎಂದರು.
ತೀರ್ಪುಗಾರರಾಗಿ ಜಿ.ಶಂಕರ್.ಜಿ.ಸಿ ಶಂಕರರೆಡ್ಡಿ, ಕಲಾಶಂಕರ್, ಡಾಕ್ಟರ್ ವೆಂಕಟಾಚಲ ಅಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಸಮಾಧಾನಕರವಾದ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ದಿಂಬಾಲ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.