ಇತ್ತೀಚಿನ ಸುದ್ದಿ
ಕೋಲಾರ: ಕರ್ನಾಟಕ- ಆಂಧ್ರ ಲಿಂಕ್ ರಸ್ತೆ ಕಾಮಗಾರಿಗೆ ಜಂಟೀ ಚಾಲನೆ
12/01/2025, 15:35
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ರಾಜ್ಯದಿಂದ ಆಂಧ್ರ ಪ್ರದೇಶದ ಬಿ.ಕೊತ್ತಕೋಟ, ಮದನಪಲ್ಲಿಗೆ ಹೋಗುವ ರಸ್ತೆಯು ಆಂಧ್ರದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದ್ದು ಮದನಪಲ್ಲಿ ಶಾಸಕರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಲಿಂಕ್ ರಸ್ತೆಗೆ ವ್ಯವಸ್ಥೆ ಮಾಡುತ್ತಿದ್ದು ಮದನಪಲ್ಲಿ ಶಾಸಕರಿಗೆ ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ ಕೃತಜ್ಞತೆ ಸಲ್ಲಿಸಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಮುದಿಮಡುಗು ಸಮೀಪದ ಆಂಧ್ರದ ಮೊರಂಕಿಂದಪಲ್ಲಿ ಗ್ರಾಮದಲ್ಲಿ ಶನಿವಾರ ರಾಜ್ಯ , ಆಂಧ್ರ ರಸ್ತೆಗೆ ಕಾಮಗಾರಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದರು.
ಅಲ್ಲದೆ ರಾಜ್ಯ ನೆರ ಹೊರೆಯ ಗ್ರಾಮಗಳಲ್ಲಿ ಬಾಂಧವ್ಯ, ಬಾವ ಬೆಸೆಗೆ ಸಂಬಂದವಿದೆ ರಾಜ್ಯದ ೨-೫೦ ಕಿಲೋಮೀಟರ್ ರಸ್ತೆ ಕಾಮಗಾರಿ ಮಾಡಬೇಕಾಗಿದ್ದು ರಾಜ್ಯ ಮತ್ತು ಆಂಧ್ರ ಪ್ರದೇಶಕ್ಕೆ ಲಿಂಕ್ ರಸ್ತೆಯನ್ನು ವ್ಯವಸ್ಥೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.
ಮದನಪಲ್ಲಿ ಶಾಸಕ ಷಹಜಾನಪಾಷ ಮಾತನಾಡಿ ರಸ್ತೆ ಇತರೆ ಮೂಲ ಭೂತ ಸೌಲಭ್ಯಗಳ ಕೊರತೆಯಿಂದ ನಾಗರೀಕರು ಬೇಸರಿಸುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವಿಬ್ಬರೂ ಸೇರಿ ಸರಿಪಡಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಿದ್ದೇವೆ ಎಂದರು.
ಗ್ರಾಮೀಣ ಭಾಗದ ಬಡಜನರಿಗೆ ತರಕಾರಿ ಹಣ್ಣು ಹಂಪರು ಸರಬರಾಜು ಮಾಡಲು ಮತ್ತು ರೈತರಿಗೆ ಅನುಕೂಲವಾಗುವಂತೆ ಈ ರಸ್ತೆ ನಿರ್ಮಿಸಲಾಗುತ್ತಿದೆ
ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಪಂ ಮಾಜಿ ಸದಸ್ಯರಾದ ಮಂಜುನಾಥ ರೆಡ್ಡಿ, ರಾಜಶೇಖರ ರೆಡ್ಡಿ, ಮುದಿಮಡುಗು ಗ್ರಾಮ ಪಂಚಾಯತಿ ಸದಸ್ಯ ಎಲ್.ರಾಜೇಶ್, ಆರ್.ಐ. ಶಂಕರ ರೆಡ್ಡಿ, ಜಿಲ್ಲಾ ಪಂಚಾಯತ್ ಇಂಜಿನಿಯರ್, ಕೃಷ್ಣಪ್ಪ,ವಾಟರ್ ಬೋರ್ಡ್ ಇಂಜಿನಿಯರ್ ಸಂತೋಷ್, ಸರ್‌ಪಂಚ್ ಆನಂದ ರೆಡ್ಡಿ, ಮಂಡಲ್ ಅಧ್ಯಕ್ಷ ಈಶ್ವರ್, ಮುಖಂಡ ವೇಣು, ಜಯಣ್ಣ, ನಾಗೇಶ್ ,ರಾಜ್ಯ ಆಂಧ್ರದ ಪಂಚಾಯಿತ್ ರಾಜ್, ಕಂದಾಯ ಅಧಿಕಾರಿಗಳು ಇದ್ದರು.