3:53 PM Tuesday8 - July 2025
ಬ್ರೇಕಿಂಗ್ ನ್ಯೂಸ್
ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ…

ಇತ್ತೀಚಿನ ಸುದ್ದಿ

ಕೋಲಾಚಲಂ ರಸ್ತೆ ಮರು ನಾಮಕರಣ ಮೂರ್ಖತನದ ಪರಮಾವಧಿ: ಪ್ರಜ್ಞಾವಂತ ನಾಗರಿಕರ ವಿರೋಧ

27/11/2024, 17:54

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಬಳ್ಳಾರಿ ನಗರದ ಕನಕದುರ್ಗಮ್ಮ ದೇವಾಲಯದಿಂದ ಬ್ರೂಸ್ ಪೇಟೆ ಪೋಲಿಸ್ ಠಾಣೆ ವರೆಗಿನ ವೆಂಕಟ್ ರಾವ್ ಕೋಲಾಚಲಂ ಹೆಸರಿನ ಜೋಡಿ ರಸ್ತೆ ಹೆಸರು ಬದಲಾವಣೆಯ ಕುರಿತು ಬಳ್ಳಾರಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿರುವುದು ಮೂರ್ಖತನದ ಪರಮಾವಧಿ ಎಂದು ನಗರದ ವಿವಿಧ ಬಡಾವಣೆಗಳ ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ಈ ಕುರಿತು ಸಭೆಯಲ್ಲಿ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ 1996 ರಲ್ಲಿ ಕೊಲಾಚಲಂ ಕುಟುಂಬದ ಸದಸ್ಯರು ಅಂದಿನ ಮುಖ್ಯಮಂತ್ರಿ ದೇವೇಗೌಡರಿಗೆ ಈ ರಸ್ತೆಗೆ ಹೆಸರು ಇಡಲು ಮನವಿ ಸಲ್ಲಿಸಿ ವಿನಂತಿಸಿದ ಹಿನ್ನೆಲೆ ಹಿನ್ನೆಲೆಯಲ್ಲಿ ಅಂದು ಜೋಡಿ ರಸ್ತೆಗೆ ಹೆಸರು ಇಟ್ಟಿರುವದು ಪಾಲಿಕೆಯ ಸಭೆಯ ಗಮನಕ್ಕೆ ಬಾರದೇ ಇರುವುದು ದುರಂತದ ಸಂಗತಿಯಾಗಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಸ್ಥಳೀಯ ವಿಚಾರವಾಗಿ ಮಹಾನಗರ ಪಾಲಿಕೆಯ ಸದಸ್ಯರಲ್ಲಿ ಮಾಹಿತಿ ಕೊರತೆ ಹಾಗೂ ಸ್ಥಳೀಯ ರಸ್ತೆಗಳ ಚಾರಿತ್ರಿಕ ಇತಿಹಾಸದ ಅರೆ ತಿಳುವಳಿಕೆ ಇಂಥ ಘಟನೆಗಳ ಘಟ್ಟಿಸಲು ಕಾರಣವಾಗಿವೆ, ಹಾಗೂ ಅಭಿವೃದ್ಧಿಪರ ಕೆಲಸ ಮಾಡುವ ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಇವು ಕರಿ ನೆರಳಾಗಿ ಕಾಡುವ ಸಂದರ್ಭಗಳನ್ನು ಸೃಷ್ಟಿಸಲು ಕಾರಣವೂ ಆಗಬಹುದು ಎಂದು ಕೆಲವರ ಅನಿಕೆಯಾಗಿದೆ.
ಈ ಅರ್ಥ ಪ್ರಸ್ತಾವನೆಯನ್ನು ನಗರ ಶಾಸಕರಾದ ಭರತ್ ರೆಡ್ಡಿಯವರು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗದಂತೆ ತಡೆ ಹಿಡಿಯಬೇಕು ಎಂದು ಹಲವರು ಈ ಮೂಲಕ ವಿನಂತಿಸಿ ಮಾಡಿಕೊಂಡಿದ್ದಾರೆ.
ಈ ಮಧ್ಯ ಕೋಲಾಚಲಂ ಕುಟುಂಬದ ಸದಸ್ಯರಾದ ವಿಶ್ವ ಪ್ರಕಾಶ ಕೋಲಾಚಲಂ ಅವರು ಸರ್ಕಾರಕ್ಕೆ ಹಾಗೂ ಮಹಾನಗರ ಪಾಲಿಕೆಗೆ ಜೋಡಿ ರಸ್ತೆ ಮರು ನಾಮಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ! ಬಳ್ಳಾರಿ ಪಾಲಿಕೆಯ ಆಡಳಿತ ಕಾಂಗ್ರೆಸ್ ಕೈಯಲ್ಲಿದೆ!, ಬಳ್ಳಾರಿಯ ಸಂಸದ-ಶಾಸಕರು ಕಾಂಗ್ರೆಸ್ಸಿನವರೇ! ಹಾಗಿದ್ದೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬ ಪ್ರಮುಖರಾದ ಕೋಲಾಚಲಂ ವೆಂಕಟರಾಯರ ಫಲಕ ಬದಲಾಯಿಸುವುದು ಮಹಾ ದ್ರೋಹವಾಗಿದೆ.
ಇಂತಹ ಮಹಾನುಭಾವರ ಹೆಸರಿನ ರಸ್ತೆ ಫಲಕವನ್ನು ರದ್ದುಪಡಿಸಿ, ಬೇರೇ ಯಾರದೋ ಹೆಸರು ಮರುನಾಮಕರಣ ಮಾಡಬೇಕೆನ್ನುವ ನಿರ್ಧಾರ ಸರ್ವಥಾ ಖಂಡನೀಯ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು