ಇತ್ತೀಚಿನ ಸುದ್ದಿ
ಕೊಡಿಪ್ಪಾಡಿ ಶಾಲೆಯಲ್ಲಿ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ
02/06/2022, 19:48

ಪುತ್ತೂರು(reporterkarnataka.com): ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ತಮ್ಮ ಕಾಲೇಜುಗಳಲ್ಲಿ ಮಾತ್ರ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಗ್ರಾಮ ವಿಕಸಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸೇವೆಗಳು ಹಲವು ಕಡೆಗಳಲ್ಲಿ ಸಲ್ಲಿಸುತ್ತಿದ್ದಾರೆ.
ಇಂದು ಕೊಡಿಪ್ಪಾಡಿ ಶಾಲೆಯಲ್ಲಿ ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಂದ ಕಸ, ಕಡ್ಡಿಗಳ ನಿವಾರಣೆ, ಹಾಗೂ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಇದರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರು ಮಾತ್ರವಲ್ಲದೆ ಯೋಜನಾ ಅಧಿಕಾರಿಗಳಾದ ಶ್ರೀನಾಥ್ ಹಾಗೂ ಅರ್ಥಶಾಸ್ತ್ರ ವಿಭಾಗದ ವಿಷ್ಣು ಕುಮಾರ್ ಪಾಲ್ಗೊಂಡರು.