10:55 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೋಡಿಕಲ್ 17ನೇ ಮೇಯರ್ ವಾರ್ಡ್ ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮಾಜ ಭವನ ಉದ್ಘಾಟನೆ

02/02/2025, 16:54

ಸುರತ್ಕಲ್ (reporterkarnataka.com): ಮಂಗಳೂರು ಮೇಯರ್ ಮನೋಜ್ ಕುಮಾರ್ ಅವರು ಪ್ರತಿನಿಧಿಸುತ್ತಿರುವ ವಾರ್ಡ್ 17ರ ಕೋಡಿಕಲ್ ಶಾಲೆಯ ಬಳಿ ಸುಸಜ್ಜಿತ ಡಾ.ಬಿ.ಆರ್ ಅಂಬೇಡ್ಕರ್ ಭವನದ ಉದ್ಘಾಟನೆ ಭಾನುವಾರ ನಡೆಯಿತು.


ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿ ಮಾತನಾಡಿ,
ಬಾಬಾ ಸಾಹೇಬ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ಸಮಾಜದಲ್ಲಿ ಶಿಕ್ಷಣದೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಅವರ ಹೆಸರಿನಲ್ಲಿ ನಿರ್ಮಾಣವಾದ ಈ ಸಮಾಜ ಭವನದಲ್ಲಿ ಶಿಕ್ಷಣ ತರಬೇತಿ,ಉದ್ಯೋಗ, ಮತ್ತಿತರ ತರಬೇತಿಗಳು,
ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಪ್ರಯೋಜನವಾಗಲಿ ಎಂದರು. ಇದೇ ಸಂದರ್ಭ ಭವನವನ್ನು ಪೂರ್ಣಗೊಳಿಸಲು ಬೇಕಾದ ಕ್ರಮ ಕೈಗೊಂಡ ಮೇಯರ್ ಮನೋಜ್ ಕುಮಾರ್ ಅವರನ್ನು ಅಭಿನಂದಿಸಿದರು.
ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಮಾಜ ಭವನ ನಿರ್ಮಾಣಕ್ಕೆ ಹಲವು ಅಡ್ಡಿ ಆತಂಕ ಎದುರಾಗಿತ್ತು.ತಾನು ಪಾಲಿಕೆ ಸದಸ್ಯನಾದ ಬಳಿಕ
ಪೂರ್ಣಗೊಳಿಸಲು ಕೊರೊನಾ ಅಡಚಣೆ ಹಾಗೂ ಆರ್ಥಿಕ ಸಮಸ್ಯೆ ಮತ್ತೆ ಎದುರಾಗಿತ್ತು.ಸಮಾಜ ಕಲ್ಯಾಣ ಇಲಾಖೆಯಿಂದಲೂ ಅನುದಾನ ತಾಂತ್ರಿಕ ಕಾರಣದಿಂದ ಸಿಗಲಿಲ್ಲ.ಕೊನೆಗೆ ಪಾಲಿಕೆ ಸಾಮಾನ್ಯ ನಿಧಿ ಹಾಗೂ ಮೀಸಲು 24.10 ನಿಧಿಯಿಂದ ಹಣ ಒದಗಿಸಿ ಇದೀಗ ಪೂರ್ಣಗೊಳಿಸಲಾಗಿದೆ. ಪ.ಜಾ, ಪಂಗಡ ,ಇತರ ಪಂಗಡ ಹಾಗೂ ಇತರರಿಗೂ ಈ ಸಮಾಜ ಭವನದಲ್ಲಿ ಕಡಿಮೆ ಶುಲ್ಕದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗುವುದು.ಇದರಿಂದ ಪಾಲಿಕೆಗೂ ಆದಾಯ ಬರುವಂತಾಗುತ್ತದೆ.ಸಮಾಜ ಮುಖೀ ಚಟುವಟಿಕೆಗೂ ಈ ಭವನ ಸದುಪಯೋಗವಾಗಲಿ ಎಂದು ಹಾರೈಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಜಯಲಕ್ಷ್ಮಿ ,ಕಿರಣ್ ಕುಮಾರ್ ಕೋಡಿಕಲ್
ಕೋಡಿಕಲ್ ಎಸ್ ಎನ್ ಡಿ ಪಿ ಮಂದಿರದ
ಸಂಚಾಲಕರಾದ ಪುರುಷೋತ್ತಮ್ ಪೂಜಾರಿ, ಮುಂಡಾಲ ಯುವ ವೇದಿಕೆಯ ಪ್ರದೀಪ್ ಕಾಪಿಕಾಡ್, ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಚಂದ್ರಕುಮಾರ್ ,ಡಾ. ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿಯ ಚಂದ್ರಹಾಸ್ ಸ್ಥಳೀಯರು,ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು