ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ
03/12/2025, 11:17
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.

ಗ್ರಾಮದ ನಂದ ಗಣಪತಿ ಎಂಬುವರ ಕಾಫಿ ತೋಟಕ್ಕೆ ರಾತ್ರಿ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ ಗಿಡಗಳು ಮತ್ತು ಅಡಿಕೆ ಗಿಡಗಳನ್ನು ಬುಡಮೇಲೆ ಮಾಡಿದೆ. ದಾಂಧಲೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ನಂದ ಗಣಪತಿ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ದಾOಧಲೆ ನಡೆಸುತ್ತಿದೆ ಅದಲ್ಲದೆ ಮನೆಯ ಸಮೀಪವೇ ಅಡ್ಡಾಡುತ್ತಾ ಆತಂಕ ಸೃಷ್ಟಿ ಮಾಡಿದೆಯಲ್ಲದೆ, ಹಣ್ಣಿನ ಗಿಡಗಳು ಸಹ ನಾಶ ಮಾಡಿದೆ. ಆನೆಗಳ ಹಾವಳಿ ಯಿಂದ ಕಾರ್ಮಿಕರು ಸಹ ಹಿಂದೇಟು ಹಾಕುತ್ತಿದ್ದಾರೆ, ಈ ಕೂಡಲೇ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.












