ಇತ್ತೀಚಿನ ಸುದ್ದಿ
Kodagu | ಶೌಚಾಲಯ ಗುಂಡಿಗೆ ಬಿದ್ದ ಕಾಡಾನೆ: ಸ್ವಪ್ರಯತ್ನದಿಂದಲೇ ಮೇಲೆದ್ದು ಬಂದ ಸಲಗ!
23/07/2025, 12:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ಚೇಲಾವರ ರೆಸಾರ್ಟ್ ಬಳಿ ತೆರೆದ ಶೌಚಾಲಯದ ಗುಂಡಿಗೆ ಕಾಡಾನೆಯೊಂದು ಆಕಸ್ಮಿಕವಾಗಿ ಬಿದ್ದ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಗುಂಡಿಯಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡಿದ್ದು, ಗುಂಡಿ ಸಣ್ಣದಾಗಿದ್ದ ಕಾರಣ ಸ್ವತಃ ಆನೆ ಹರಸಾಹಸ ಪಟ್ಟು ಮೇಲೇರಿ ಪಕ್ಕದ ತೋಟದದತ್ತ ತೆರಳಿತು.