ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ ಹಾನಿ
14/07/2025, 20:16

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ಗಡಿಯಾರ ಕಂಬದ ಸಮೀಪವಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಎರಡು ವಸತಿ ಗೃಹಗಳಿಗೆ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿ ಸ್ಪರ್ಶಗೊಂಡ ವಸತಿಗೃಹಗಳ ಪೈಕಿ ಒಂದರಲ್ಲಿ ಮನೆಮಂದಿ ಹಾಗೂ ಸಾಕು ಪ್ರಾಣಿಗಳಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಇನ್ನೊಂದು ವಸತಿಗೃಹದಲ್ಲಿ ಯಾರೂ ಇರಲಿಲ್ಲ.