ಇತ್ತೀಚಿನ ಸುದ್ದಿ
Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ; ಇನ್ನೆರಡು ಗಂಭೀರ
13/07/2025, 23:43

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಹುಲಿಗಳ ದಾಳಿ ಮುಂದುವರೆದಿದ್ದು, ಪೊನ್ನoಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದ ಕುಂಞ್ಞಪಂಡ ರಾಜೇಶ್ ರವರಿಗೆ ಸೇರಿದ 3 ಹಸುಗಳ ಮೇಲೆ ಹುಲಿ ದಾಳಿ ಮಾಡಿದು ಒಂದು ಹಸುವನ್ನು ಬಲಿ ಪಡೆದುಕೊಂಡಿದ್ದು, ಮತ್ತೆರಡು ಹಸುಗಳ ಸ್ಥಿತಿ ಗಂಭೀರವಾಗಿದೆ.
ಕಾಡಾನೆಗಳ ರೀತಿಯಲ್ಲೇ ಹುಲಿಗಳು ಸಹ ಅರಣ್ಯದಂಚಿನ ಗ್ರಾಮದಲ್ಲಿ ಬೀಡು ಬಿಟ್ಟಿರುವ ಹುಲಿಗಳಿಂದ ದಿನನಿತ್ಯ ಆತಂಕದಲ್ಲೇ ದಿನ ದೂಡುತ್ತಿರುವ ಬೆನ್ನಲ್ಲೇ ಈ ದಾಳಿ ಸಂಭಾವಿಸಿದೆ. ಸದ್ಯ ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ದಾಳಿಯನ್ನು ತಡೆಗಟ್ಟುವಲ್ಲಿ ಈಗಾಗಲೇ 3 ಹುಲಿಗಳ ಸೆರೆಗೆ ಅನುಮತಿ ದೊರೆತರೂ ಇನ್ನೂ ಕಾರ್ಯಾಚರಣೆ ಕೈಗೊಳ್ಳದಿರುವುದು ಈ ಸರಣಿ ಜಾನುವಾರುಗಳ ಮೇಲೆ ಆದ ದಾಳಿಯೇ ಸಾಕ್ಷಿ.