ಇತ್ತೀಚಿನ ಸುದ್ದಿ
Kodagu | ಮುಂದುವರಿದ ವ್ಯಾಘ್ರ ಹಾವಳಿ: ವಿರಾಜಪೇಟೆ ಬಳಿ ಹುಲಿ ದಾಳಿಗೆ ಹಸು ಬಲಿ
27/07/2025, 23:26

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮುಂದುವರೆದಿದೆ. ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಪಂಚಾಯ್ತಿಯ ವಿ. ಬಾಡಗ ಗ್ರಾಮದಲ್ಲಿ ಗದ್ದೆಯಲ್ಲಿ ಮೇಯಲು ಬಿಟ್ಟಿದ ತೀತಿಮಾಡ ಬೋಪಣ್ಣ ಅಯ್ಯಪ್ಪನವರ ಹಾಲು ಕರೆಯುತ್ತಿದ್ದ ಹಸುವನ್ನು ಹುಲಿ ಕೊಂದು ಸ್ವಲ್ಪ ಭಾಗ ತಿಂದು ಹಾಕಿದ ಘಟನೆ ನಡೆದಿದೆ.
ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸು ಕಾಣೆಯಾಗಿ ನೆನ್ನೆಯಿಂದ ಹುಡುಕಿ ಇಂದು ಪಕ್ಕದ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ.
ಅಂದಾಜು 15 ಲೀಟರ್ನಷ್ಟು ಹಾಲು ಕೊಡುತ್ತಿದ್ದ ಹಸು ಹುಲಿ ದಾಳಿಗೆ ಬಲಿಯಾಗಿದ್ದು ಬೋಪಣ್ಣನವರು ಕಂಗೆಡುವಂತೆ ಮಾಡಿದೆ, ಸುತ್ತ ಮುತ್ತಲಿನ ಜನರು ಕೂಡ ಇನ್ನು ಮುಂದೆ ಹುಲಿಯ ಭಯದಲ್ಲೇ ಕಾಲ ಕಳೆಯುವಂತಾಗಿದೆ, ಜನ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಕೋರಿಕೊಂಡಿದ್ದಾರೆ.