ಇತ್ತೀಚಿನ ಸುದ್ದಿ
Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು ಪುನರ್ ನಾಮಕರಣ
16/07/2025, 11:35

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹಾಸನ ಜಿಲ್ಲೆಯ ಬೇಲೂರು ನಲ್ಲಿ ಉಪಟಳ ನೀಡುತ್ತಿದ್ದ ಕರಡಿ ಹೆಸರಿನ ಆನೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗುತ್ತಿದ್ದು ಸಾರ್ವಜನಿಕ ದರ್ಶನಕ್ಕೆ ಸಿದ್ದಗೊಂಡಿದ್ದಾನೆ. ಬೇಲೂರಿನ ಸುತ್ತಮುತ್ತ ಸಾಕಷ್ಟು ಉಪಟಳ ನೀಡಿ ರಾಜ್ಯಾದ್ಯoತ ಸುದ್ದಿ ಮಾಡಿದ್ದ ಈ ಆನೆಯನ್ನು ಸ್ಥಳೀಯವಾಗಿ ಕರಡಿ ಆನೆ ಎಂದು ಗುರುತಿಸಲಾಗುತ್ತಿತ್ತು.
2024ರ ಏಪ್ರಿಲ್ 18ರಂದು ನಡೆದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಪ್ರಶಾಂತ, ಸುಗ್ರೀವ, ಭೀಮ, ಅಶ್ವತಾಮ, ಮಹೇಂದ್ರ ಸಾಕಾನೆಗಳ ಸತತ ಆನೆ ಕಾರ್ಯಾಚರಣೆಯಲ್ಲಿ ಸೆರೆಯಾದ ಕರಡಿ ಆನೆಯನ್ನು ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತ ಕರಿಯಪ್ಪ ಮತ್ತು ಕಾವಾಡಿ ಅನಿಶ್ ಅವರಿಂದ ಪಳಸಿಗಿದ್ದು ಕರಡಿ ಬದಲು “ಬಬ್ರುವಾಹನ” ಎಂದು ನಾಮಕರಣಗೊಂಡು ಸಾರ್ವಜನಿಕ ದರ್ಶನ ನೀಡಲಿದೆ. ಸತತವಾಗಿ ಒಂದು ವರ್ಷಗಳ ಕಾಲ 37 ವರ್ಷದ ಈ ಗಂಡಾನೆಯನ್ನು ಪಳಗಿಸಿ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.