ಇತ್ತೀಚಿನ ಸುದ್ದಿ
Kodagu | ಸುಂಟಿಕೊಪ್ಪ: ಅಪಘಾತಕ್ಕೀಡಾದ ಕಾರಿನ ಮೇಲೆ ಬಿದ್ದ ದಿಮ್ಮಿ ಸಾಗಿಸುತ್ತಿದ್ದ ಲಾರಿ
13/02/2026, 11:31
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗರಹಳ್ಳಿ ಸಮೀಪದ ಮಾರುತಿ ನಗರದ ಬಳಿ ನೆನ್ನೆ ರಾತ್ರಿ ಸಂಭವಿಸಿದ ರಿಟ್ಜ್ ಹಾಗೂ ಬೊಲೆನ ಕಾರುಗಳ ನಡುವೆ ಅಪಘಾತದ ನಂತರ ಅದೇ ಜಾಗದಲ್ಲಿ ಮತ್ತೊಂದು ಅವಘಡ ನಡೆದಿದೆ. ಇಂದು ನಸುಕಿನ ವೇಳೆ 4 ಗಂಟೆಗೆ ಮಡಿಕೇರಿ ಕಡೆಯಿಂದ ಮೈಸೂರಿನತ್ತ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಮೂರ್ನಾಡಿನ ಲಾರಿ, ಅಪಘಾತದ ನಂತರ ರಸ್ತೆ ಬದಿ ನಿಂತಿದ್ದ ಬೊಲೆನ ಕಾರಿನ ಮೇಲೆ ಬಿದ್ದಿದೆ. ಇದರಿಂದ ಬೊಲೆನ ಕಾರು ಇನ್ನಷ್ಟು ಹಾನಿಗೊಳಗಾಗಿದೆ



*ರಿಟ್ಜ್ ಮತ್ತು ಬಲೆನೊ ಕಾರುಗಳ ನಡುವೆ ಡಿಕ್ಕಿ*
ಕಳೆದ ರಾತ್ರಿ ಕೊಡಗರಹಳ್ಳಿ ಸಮೀಪದ ಮಾರುತಿನಗರ ಬಳಿ ಮೈಸೂರಿನ ರಿಟ್ಜ್ ಕಾರು ಮತ್ತು ತಾಳತ್ ಮನೆಯ ಬೊಲೆನಾ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಮೈಸೂರಿನ ರಿಟ್ಜ್ ಕಾರಿನಲ್ಲಿದ್ದ ಯುವತಿಗೆ ಮತ್ತು ಬೊಲೆನಾ ಕಾರಿನಲ್ಲಿದ್ದ ಓರ್ವನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದ್ದು ಹೆಚ್ಚಿನ ಚಿಕೆತ್ಸೆಗೆ ಮಡಿಕೇರಿ ಆಸ್ಪತ್ರೆಗೆ ರವನಿಸಲಾಗಿತ್ತು. ಇಂದು ಲಾರಿ ಮಗುಚಿದ ಪರಿಣಾಮ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮಡಿಕೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ,ಎರಡು ಅಪಘಾತ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












