ಇತ್ತೀಚಿನ ಸುದ್ದಿ
Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ ಮಹಿಳೆ ಗಂಭೀರ ಗಾಯ
31/10/2025, 22:23
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಅಂಗನವಾಡಿಗೆ ತೆರಳುತ್ತಿದ್ದ ಮಗುವಿಗೆ ಬೀದಿ ನಾಯಿಯೊಂದು ಕಚ್ಚಿ ಗಾಯಗೊಳಿಸಿದ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ. ತೊರೆಬೀದಿಯಲ್ಲಿ ಸುನಿತಾ ಎಂಬುವರ ಪುತ್ರಿ ಸೌಮ್ಯ ಎಂಬವರಿಗೆ ನಾಯಿ ಕಾಲಿಗೆ ಕಚ್ಚಿ ಗಂಭೀರ ಗಾಯ ಉಂಟಾಗಿದೆ.
ಗಾಯಾಳು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಪೊನ್ನಂಪೇಟೆಯಲ್ಲಿ ಮಿತಿಮೀರಿದ ಬೀದಿ ನಾಯಿಗಳು ಎಲ್ಲಾ ಮೀನು ಮತ್ತು ಮಾಂಸ ಅಂಗಡಿಗಳ ಮುಂಭಾಗ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದ್ದು, ಬೆಳಂಬೆಳ್ಳಗೆ ನಾಯಿಗಳೆಲ್ಲ ಆಹಾರ ಆರಿಸಿ ಪಟ್ಟಣದ ಬೀದಿಬೀದಿಗಳಲ್ಲಿ ಸಂಚರಿಸುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ಪಟ್ಟಣ ಪಂಚಾಯಿತಿಗೆ ಮೌಖಿಕವಾಗಿ ಹಲವರು ದೂರು ನೀಡಿದ್ದರು ಕೂಡ ಯಾವುದೇ ರೀತಿಯ ಸ್ಪಂದನೆ ದೊರಕುತ್ತಿಲ್ಲ ಎಂದು ಹಲವು ಸಾರ್ವಜನಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.












