ಇತ್ತೀಚಿನ ಸುದ್ದಿ
Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ
23/08/2025, 18:33

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಅಂಗಳದಲ್ಲಿ ಚೆಲ್ಲಾಪಿಲ್ಲಿ ಯಾಗಿರುವ ಹೂವು ಕುಂಡಗಳು, ಮನೆಯ ಗೋಡೆಗಳಿಗೆ ತಿವಿತ, ಮುರಿದು ಬಿದ್ದಿರುವ ಬಾಸ್ಕೆಟ್ ಬಾಲ್ ಪೋಲ್, ಕಾಫಿ-ಹಣ್ಣಿನ ಗಿಡಗಳು ಸರ್ವನಾಶ, ಎಲ್ಲೆಂದರಲ್ಲಿ ಆನೆಯ ಲದ್ದಿ. ಹೌದು ಇದು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ವಂದನಾಪುರ ಕಾಫಿ ಎಸ್ಟೇಟ್ ಮನೆಯ ಆವರಣದಲ್ಲಿ ಕಂಡು ಬಂದ ದೃಶ್ಯಗಳು.
ಕಳೆದ ರಾತ್ರಿ ಹೊತ್ತಿನಲ್ಲಿ ಆನೆಗಳ ಹಿಂಡು ಮನೆಯ ಅವರಣಕ್ಕೆ ಪ್ರವೇಶಿಸಿದ್ದು, ಆನೆಗಳ ಆರ್ಭಟಕ್ಕೆ ಧ್ವoಸ ಗೊಂಡಿರುವ ವಸ್ತುಗಳು ಸಾಕ್ಷಿ ಹೇಳುತ್ತಿವೆ. ದಾಳಿ ಬಳಿಕ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದ್ದು, ಆಗಿರುವ ನಷ್ಟ ಅರಣ್ಯ ಇಲಾಖೆ ತುಂಬಲಿದೆಯೇ ಎನ್ನುವುದು ಎದ್ದಿರುವ ಪ್ರಶ್ನೆ.