ಇತ್ತೀಚಿನ ಸುದ್ದಿ
Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ
03/01/2026, 22:57
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆಯ ಮೂರ್ನಾಡು ಜಂಕ್ಷನ್ ಬಳಿ ಶುಕ್ರವಾರ ರಾತ್ರಿ 11:45 ಸಮಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಂದೂಕನ್ನು ಪ್ರದರ್ಶನ ಮಾಡಿದ ಮೂವರನ್ನು ಕೋವಿ ಸಹಿತ ವಿರಾಜಪೇಟೆ ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಆರೋಪಿಗಳನ್ನು
ಮರಂದೋಡು ಗ್ರಾಮದ ಬಾಳೆಗುಂಡು ಕೆರೆತಟ್ಟು ಪೈಸಾರಿ ನಿವಾಸಿ ಯೋಗೀಶ್ ಎ.ಆರ್.( 23),ನಾಪೋಕ್ಲು ಹೋಬಳಿ
ಕಕ್ಕಟ್ಟೆ ನಿವಾಸಿ ಜಯ ಪಿ.ಎಂ. ಹಾಗೂ ನಾಪೋಕ್ಲು ಹೋಬಳಿ
ಕೊಳಕೇರಿ ಗ್ರಾಮದ ಸೋಮಣ್ಣ ಎಂ. (33) ಎಂದು ಗುರುತಿಸಲಾಗಿದೆ.
*ಘಟನೆಯ ವಿವರ:*
ಶುಕ್ರವಾರ ರಾತ್ರಿ ಹೆಡ್ ಕಾನ್ಸ್ಟೇಬಲ್ ಅಕ್ಷಯ್ ಅವರು ವಿರಾಜಪೇಟೆ ನಗರದಲ್ಲಿ ರಾತ್ರಿ ಗಸ್ತು ತಿರುಗಾಡುತ್ತಿದ್ದ ಸಮಯ 11:45 ಗಂಟೆಗೆ ವೇಳೆಯಲ್ಲಿ ಅಕ್ಷಯ್ ರವರಿಗೆ ಬಾತ್ಮಿದಾರರು ಕರೆ ಮಾಡಿ ಮುರ್ನಾಡ್ ಜಂಕ್ಷನ್ ನಲ್ಲಿ K A 12 C 1331 ಆಟೋ ರಿಕ್ಷಾದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕನ್ನು ಹೊರಗೆ ಕಾಣುವಂತೆ ಹಿಡಿದುಕೊಂಡು ಕುಳಿತುಕೊಂಡಿರುವುದಾಗಿ ತಿಳಿಸಿದ ಮೇರೆಗೆ ಕೂಡಲೇ ಅಕ್ಷಯ್ ಮೂರ್ನಾಡು ಜಂಕ್ಷನ್ ಗೆ ಹೋಗಿ ನೋಡಿದಾಗ ಬಾರ್ ಮುಂಭಾಗದಲ್ಲಿ ಆಟೋರಿಕ್ಷಾ ಒಂದು ನಿಲ್ಲಿಸಿಕೊಂಡಿದ್ದು ಆಟೋರಿಕ್ಷಾದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕನೊಂದಿಗೆ ಇದ್ದು ನಂತರ ಇಬ್ಬರನ್ನು ವಶಕ್ಕೆ ಪಡೆದು ನೀಡಿದ ದೂರಿನ ಮೇಲೆ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ಕುಡಿತದ ಅಮಲಿನಲ್ಲಿ ಒಂಟಿ ನಳಿಕೆಯನ್ನು ಆಟೋರಿಕ್ಷಾದಲ್ಲಿ ಇಟ್ಟುಕೊಂಡು ಓಡಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಪೊಲೀಸರು ಅವರುಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂದೂಕನ್ನು ತೆಗೆದುಕೊಂಡು ರಾತ್ರಿ ಸಮಯದಲ್ಲೇ ಆಟೋರಿಕ್ಷಾದಲ್ಲಿ ಸುತ್ತಾಡುತ್ತಿದ್ದ ಉದ್ದೇಶವನ್ನು ಪೊಲೀಸರು ತನಿಖೆಯಿಂದ ತಿಳಿಯಬೇಕಷ್ಟೇ.












