ಇತ್ತೀಚಿನ ಸುದ್ದಿ
Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು; ಸಂಚಾರ ಅಸ್ತವ್ಯಸ್ತ
25/07/2025, 11:04

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ ರಾತ್ರಿಯಿಂದ ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು ಪೊನ್ನoಪೇಟೆ ತಾಲ್ಲೂಕಿನ ಕುಟ್ಟ -ಶ್ರೀಮಂಗಲ ರಸ್ತೆ ಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇಲ್ಲಿನ ಕಾಯಿಮನಿ ಭದ್ರಕಾಳಿ ದೇವಸ್ಥಾನ ಬಳಿಯ ತೋಟದಿಂದ ರಸ್ತೆ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ರಸ್ತೆ ಬದಿ ಇದ್ದ 11 ಕೆವಿ ವಿದ್ಯುತ್ ಮಾರ್ಗಕ್ಕೂ ಹಾನಿಯಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ 275ನಲ್ಲಿ ಗದ್ದೆ ಹಳ್ಳ ಬಳಿ ಬೆಳಗ್ಗಿನ ಜಾವ ಬಾರಿ ಗಾತ್ರದ ಬೀಟೆ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡು ಪರ್ಯಾಯ ಮಾರ್ಗವಿಲ್ಲದೆ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಮಾನ್ಯವಾಗಿದ್ದು ಸ್ಥಳೀಯರ ಸಹಾಯದಿಂದ ಮರ ತೆರವು ಕಾರ್ಯ ನಡೆಸಲಾಗಿದೆ.