ಇತ್ತೀಚಿನ ಸುದ್ದಿ
Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು
10/07/2025, 16:00

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 275 ರ ಜನನಲ್ಲಿ ಇಂದು ಬೆಳಗ್ಗಿನ ಜಾವ ಲಾರಿ ಯೊಂದು ವ್ಯಕ್ತಿ ಮೇಲೆ ಹರಿದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ, ಕುಶಾಲನಗರ ಹೊರವಲಯದ ಗುಡ್ಡೆಹೊಸೂರು ನಲ್ಲಿ ಈ ಘಟನೆ ಸಂಭವಿಸಿದ್ದು, ಮೃತನನ್ನು ನಾಪೋಕ್ಲು ಸಮೀಪದ ಕೊಟ್ಟಮುಡಿ ಗ್ರಾಮದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿಯಿಂದ ಹೆದ್ದಾರಿ ಬದಿಯಲ್ಲೇ ಅಡ್ಡಾಡುತ್ತಿದ್ದ ಎನ್ನಲಾಗಿದ್ದು, ಇಂದು ಬೆಳಿಗ್ಗೆ ಮೈಸೂರಿನತ್ತ ತೆರಳುತ್ತಿದ್ದ ಲಾರಿ ಈತನ ಮೇಲೆ ಹರಿದು ಮೃತಾಪಟ್ಟಿದ್ದಾನೆ.
ಕುಶಾಲನಗರ ಸಂಚಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.