ಇತ್ತೀಚಿನ ಸುದ್ದಿ
Kodagu | ಮಡಿಕೇರಿ: ಆಕಸ್ಮಿಕ ಗುಂಡಿನ ಚೂರು ತಗುಲಿ ಇಬ್ಬರು ಯುವಕರಿಗೆ ಗಾಯ
06/12/2025, 21:03
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ತಾಲ್ಲೂಕು ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಯುವಕರಿಬ್ಬರಿಗೆ ಆಕಸ್ಮಿಕ ಗುಂಡಿನ ಚೂರು ತಗುಲಿ ಗಾಯಗೊಂಡ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಸಂಪಿಗೆಕೊಲ್ಲಿ ಸಾಲುಮನೆ ನಿವಾಸಿ ಸತೀಶ್ ಹಾಗೂ ಗುಡ್ಡೆಹೊಸೂರು ನಿವಾಸಿ ಮಿಟ್ಟು ಕಾಫಿ ತೋಟದ ರಸ್ತೆ ಮೂಲಕ ಮುಖ್ಯ ರಸ್ತೆಗೆ ತೆರಳುವ ವೇಳೆ ಏಕಾಏಕಿ ಗುಂಡಿನ ಚೂರು(catridge pillets) ಸತೀಶ್ ಭುಜಕ್ಕೆ ಹಾಗೂ ಮಿಟ್ಟು ಕುತ್ತಿಗೆ ಭಾಗಕ್ಕೆ ತಾಗಿದ್ದು ತಕ್ಷಣವೇ ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












