ಇತ್ತೀಚಿನ ಸುದ್ದಿ
Kodagu | ದೇಶದಲ್ಲಿ ಶುದ್ಧ ಗಾಳಿಯ ನಗರ: ಮಡಿಕೇರಿಗೆ ಟಾಪ್ 10ನಲ್ಲಿ ಸ್ಥಾನ
09/12/2025, 13:14
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmsil.com
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿರುವ ದೇಶದಲ್ಲಿ ಶುದ್ಧಗಾಳಿ ಲಭ್ಯವಿರುವ ಪ್ರಮುಖ ನಗರಗಳ ಟಾಪ್ 10 ನಗರಗಳ ಪೈಕಿ ಕೊಡಗು ಜಿಲ್ಲೆಯ ಮಡಿಕೇರಿ ನಗರ 10ನೇ ಸ್ಥಾನ ಪಡೆದಿದೆ.
ದೇಶದಲ್ಲಿ ಶುದ್ಧ ಗಾಳಿ ಸಿಗುತ್ತಿರುವ ನಗರಗಳು ಮತ್ತು ಮಾಲಿನ್ಯ
ಶುದ್ಧ ಗಾಳಿ ಎಂಬುದೇ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ ಕರ್ನಾಟಕದ ಮೂರು ನಗರಗಳು ರಾಷ್ಟ್ರ ಮಟ್ಟದಲ್ಲಿ ಶುದ್ಧಗಾಳಿ ಲಭ್ಯವಿರುವ ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶುದ್ಧ ಗಾಳಿ ಲಭ್ಯವಿರುವ ದೇಶದ ಪ್ರಮುಖ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ ಶುದ್ಧ ಗಾಳಿ ಸಿಗುತ್ತಿರುವ ನಗರಗಳು ಮತ್ತು ಮಾಲಿನ್ಯ ಪ್ರಮಾಣ ಕಳಪೆ ಮಟ್ಟಕ್ಕೆ ಕುಸಿದ ನಗರಗಳ ಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದೆ.
ಡಿ. 7ರ ಮಾಹಿತಿಯಂತೆ ತಮಿಳುನಾಡಿನ ಹಲವು ನಗರಗಳು ಉತ್ತಮ ಗಾಳಿಯ ಗುಣಮಟ್ಟ ಹೊಂದಿವೆ ಎಂದು ಮಂಡಳಿಯ ದಾಖಲೆಗಳು ಹೇಳುತ್ತವೆ. ಇದರಲ್ಲಿ ಅಗ್ರ ಸ್ಥಾನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಶ್ರೀ ವಿಜಯಪುರಂ ಇದೆ.
ನಂತರದ ಸ್ಥಾನದಲ್ಲಿ ಸಿಕ್ಕಿಂನ ಗ್ಯಾಂಗ್ಟಕ್ ಹಾಗೂ ಬಿಹಾರದ ಬೆಗುಸರಾಯ್ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ.
ನಂತರದ ಸ್ಥಾನದಲ್ಲಿ ಮಧ್ಯಪ್ರದೇಶದ ಡಾಮೋಹ್ ಐಜ್ವಾಲ್, ರಾಮನಾಥಪುರಂ ಹಾಗೂ ಜಾನ್ಸಿ ನಗರಗಳಿವೆ.
ಕರ್ನಾಟಕದ ಮೂರು ನಗರಗಳಲ್ಲಿನ ಗಾಳಿಯ ಗುಣಮಟ್ಟ ಉತ್ತವಾಗಿದೆ. ಇದರಲ್ಲಿ ಚಿಕ್ಕಮಗಳೂರು 5ನೇ, ಚಾಮರಾಜನಗರ 8ನೇ ಹಾಗೂ ಮಡಿಕೇರಿ 10ನೇ ಸ್ಥಾನದಲ್ಲಿವೆ.












