ಇತ್ತೀಚಿನ ಸುದ್ದಿ
Kodagu | ಕುಶಾಲನಗರ: ಬೀದಿನಾಯಿ ದಾಳಿಗೆ ಜಿಂಕೆ ಬಲಿ
18/10/2025, 20:09

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmaill.com
ಕುಶಾಲನಗರ ತಾಲ್ಲೂಕಿನ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದ ಆನೆಕಾಡು ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಜಿಂಕೆಯೊಂದನ್ನು ಕೊಂದು ಹಾಕಿದ್ದು, ಅದರ ಕಳೆಬರಹ ಪತ್ತೆಯಾಗಿದೆ.
ಆನೆಕಾಡು ಅರಣ್ಯ ಪ್ರದೇಶಕ್ಕೆ ಸೇರಿದ ಅಂದಾಜು 20 ವರ್ಷ ಪ್ರಾಯದ ಜಿಂಕೆಯೊಂದರ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕೊಂದು ಹಾಕಿದ್ದು, ಜಿಂಕೆಯ ಕಳೆಬರಹವು ಅರಣ್ಯದಂಚಿನ ಆನೆ ಕಂದಕದಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆನೆಕಾಡು ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.