ಇತ್ತೀಚಿನ ಸುದ್ದಿ
Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು ಬಂದ 12.3 ಟಿಎಂಸಿ ನೀರು
07/07/2025, 19:43

ಮಡಿಕೇರಿ(reporterkarnataka.com): ಕಾವೇರಿ ಒಡಲಿನ ಪ್ರಮುಖ ಆಣೆಕಟ್ಟು ಹಾರಂಗಿ 19 ವರ್ಷದ ಬಳಿಕ ಸರಿಸಾಮಾನವಾಗಿ ಒಳಹರಿವು ಮತ್ತು ಹೊರಹರಿವು ಸೃಷ್ಟಿಯಾಗಿದೆ. ಜುಲೈ ಆರಂಭದಲ್ಲೇ ಈ ಸಾಲಿನಲ್ಲಿ ಇದುವರೆಗೆ ಹರದೂರು ನದಿ ಸೇರಿದಂತೆ ಉಪನದಿಗಳಿಂದ ಸಂಗ್ರಹವಾಗಿ ಜಲಾಶಯಕ್ಕೆ ಒಟ್ಟು 12.3 ಟಿಎಂಸಿ ನೀರು ಹರಿದು ಬಂದಿದ್ದು, ಸರಿಸುಮಾರು 11.3 ಟಿಎಂಸಿ ಅಷ್ಟು ಹೆಚ್ಚುವರಿ ನೀರನ್ನು ನಾಲ್ಕು ಕ್ರೇಸ್ಟ್ ಗೇಟ್ ಮತ್ತು ವಿದ್ಯುತ್ ಘಟಕದ ಮೂಲಕ ನದಿಗೆ ಹರಿ ಬಿಡಲಾಗಿದೆ.ಸದ್ಯ ಜಲಾಶಯದಲ್ಲಿ 6.6 ಟಿಎಂಸಿ ನೀರು ಸಂಗ್ರಹವಾಗಿದೆ.