ಇತ್ತೀಚಿನ ಸುದ್ದಿ
Kodagu | ಗೋಣಿಕೊಪ್ಪ ಡ್ರೈವರ್ ಹತ್ಯೆ ಪ್ರಕರಣ: ಮಹಿಳೆ ಸೇರಿ 5 ಮಂದಿ ಆರೋಪಿಗಳ ಬಂಧನ
04/01/2026, 20:37
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹೊಸ ವರ್ಷದ ಮೊದಲ ದಿನವೇ ನಡೆದ ಗೋಣಿಕೊಪ್ಪದ ಡ್ರೈವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಅನೈತಿಕ ಸಂಬಂಧದ ವಾಸನೆ ಬಂದ ಹಿನ್ನಲೆಯಲ್ಲಿ ಜಾಡು ಹಿಡಿದು ಹೊರಟ ಪೊಲೀಸರು, ಹತ್ಯೆಗೆ ಈಡಾದ ನವಾಜ್ ಪ್ರೇಯಸಿ ಎನ್ನಲಾದ ಕಾವ್ಯಾ, ಈಕೆಯ ಪತಿ ಪೂರ್ಣಚಂದ್ರ ತೇಜಸ್ವಿ, ಅಶೋಕ್, ಕುಮಾರ್ ಹಾಗೂ ಮಹೇಂದ್ರ ಎಂಬವರನ್ನು ಬಂಧಿಸಲಾಗಿದೆ.
*ಘಟನೆ ವಿವರ:* ಡಿಸೆಂಬರ್ 31ರ ರಾತ್ರಿ ವಿರಾಜಪೇಟೆ ತಾಲ್ಲೂಕಿನ ಹರೀಶ್ಚಂದ್ರಪುರ ಗ್ರಾಮದ ನವಾಜ್ ತನ್ನ ಕಾರಿನಲ್ಲಿ ಕುಂದ ಗ್ರಾಮದಲ್ಲಿರುವ ಕಾಫಿ ಕ್ಯೂರಿಂಗ್ ವರ್ಕ್ಸ್ ನಿಂದ ಕಾವ್ಯಾಳ ಬಾಡಿಗೆ ಮನೆಗೆ ಆಗಮಿಸಿ ಬಾಗಿಲು ಬಡಿದಿದ್ದಾನೆ, ಈ ವೇಳೆ ಬಾಗಿಲು ತೆಗೆದ ಕಾವ್ಯಾಳ ಪತಿ ಪೂರ್ಣ ಚಂದ್ರ ಮತ್ತು ನವಾಜ್ ನಡುವೆ ಜಗಳ ನಡೆದಿದ್ದು, ಗಲಾಟೆ ಜೋರಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಆಗಮಿಸಿದ್ದು ಈ ವೇಳೆ ತಪ್ಪಿಸಿ ಕೊಳ್ಳಲು ಹೋಗಿ ನವಾಜ್ ಹಳ್ಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ಅದೇ ಸ್ಥಳ ದಲ್ಲಿ ಚೆನ್ನಾಗಿ ಥಳಿಸಿದ ಆರೋಪಿಗಳು ಬಳಿಕ ನವಾಜ್ ಕಾರ್ ನಲ್ಲಿ ಕೂರಿಸಿ ಅಪಘಾತ ಆದಂತೆ ರಸ್ತೆ ಬದಿಯ ಹಳ್ಳಕ್ಕೆ ತಳ್ಳಿ ಬಿಂಬಿಸಿದ್ದಾರೆ. ಪ್ರಕರಣದಲ್ಲಿ ನೇರ ಭಾಗಿ ಹಿನ್ನಲೆಯಲ್ಲಿ ವಿಚಾರಣೆ ಎದುರಿಸುತ್ತಿದ್ದ ವೇಳೆ ತಪ್ಪು ಒಪ್ಪಿಕೊಂಡ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.












