ಇತ್ತೀಚಿನ ಸುದ್ದಿ
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ ನ್ಯಾಯಾಂಗ ಬಂಧನ
03/10/2025, 23:35

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ದಸರಾ ಬಹುಮಾನ ವಿತರಣೆ ವಿಷಯದಲ್ಲಿ ಉಂಟಾದ ಆಕ್ರೋಶ, ಪ್ರತಿಭಟನೆ ವೇಳೆ ಡಿವೈಎಸ್ಪಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗೆ ಅ. 16 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಡಿಕೇರಿ ದಸರಾದ ಶೋಭಯಾತ್ರೆ ಬಹುಮಾನ ವಿತರಣೆ ಸಂದರ್ಭ ತೀರ್ಪುಗೆ ಅಸಮಾಧಾನ ಗೊಂಡು ಉಂಟಾದ ಗಲಾಟೆಯಲ್ಲಿ ಕಲಾಸೌರಭ ವೇದಿಕೆಯಿಂದ ಡಿ ವೈ ಎಸ್ಪಿ ಸೂರಜ್ ಅವರನ್ನು ಕೆಳಗೆ ತಳ್ಳಿರುವ ಪ್ರಕರಣ ಸಂಬಂಧಿಸಿದಂತೆ ಆರೋಪಿ ಯಕ್ಷಿತ್ ನನ್ನು ತಕ್ಷಣವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅಕ್ಟೋಬರ್ 16 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಅದೇಶಿಸಿದೆ.