ಇತ್ತೀಚಿನ ಸುದ್ದಿ
ಕೊಡಗು- ದ.ಕ.ಜಿಲ್ಲೆ ಗಡಿಯಲ್ಲಿ ಮತ್ತೆ 2 ಬಾರಿ ಭೂಕಂಪನ: ಭಯಭೀತರಾಗಿ ಹೊರಗೋಡಿದ ಮನೆ ಮಂದಿ
01/07/2022, 09:57
ಮಡಿಕೇರಿ(reporterkarnataka.com): ದಕ್ಷಿಣ ಕನ್ನಡ ಮತ್ತು ಕೊಡಗು ಜೆಲ್ಲೆಯ ಗಡಿಭಾದಲ್ಲಿ ಮತ್ತೆ ಎರಡು ಬಾರಿ ಭೂಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
1 ಗಂಟೆಯಿಂದ 1.40ರ ಅವಧಿಯಲ್ಲಿ ಸಂಪಾಜೆ, ಕರಿಕೆ, ಪೆರಾಜೆ, ಗೂನಡ್ಕ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಕಂಪನದ ಅನುಭವ ಆಗಿದೆ. ದೊಡ್ಡ ಶಬ್ದ ಎರಡು ಬಾರಿಯೂ ಹೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಗುರುವಾರ ಸಂಪಾಜೆಯಲ್ಲಿ ರಿಕ್ಟರ್ ಮಾಪನ ಅಳವಡಿಸಲಾಗಿದ್ದು, ಭೂಕಂಪದ ಪ್ರಮಾಣ ಸ್ಪಷ್ಟವಾಗಿ ಇನ್ನಷ್ಟೇ ತಿಳಿಯಬೇಕಾಗಿದೆ.