5:19 AM Monday2 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

Kodagu | ಕುಯಿಲು ಮಾಡಿದ ಕಾಫಿ ಕಳ್ಳತನ: ಕಾರ್ಮಿಕ ದಂಪತಿ ಬಂಧನ

25/09/2025, 14:26

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಪೊನ್ನoಪೇಟೆ ತಾಲ್ಲೂಕಿನ ಕಿರುಗೂರು ಗ್ರಾಮದಲ್ಲಿ ತೋಟದ ಮಾಲೀಕ ಕುಯಿಲು ಮಾಡಿ ಸಂಗ್ರಹಿಸಿಟ್ಟಿದ್ದ ಕಾಫಿ ಯನ್ನು ಕಾರ್ಮಿಕ ದಂಪತಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಕಿರುಗೂರು ಗ್ರಾಮದ ಗಣೇಶ್ ಎಂಬುವವರ ತೋಟಕ್ಕೆ ಕೆಲವು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹುಲಿಕೇರಿ ಗ್ರಾಮದ ಹರ್ಷ ಮತ್ತು ಆತನ ಪತ್ನಿ ವೀಣಾ ಕೆಲಸಕ್ಕೆ ಬಂದಿದ್ದು, ಮಾಲೀಕ ಗಣೇಶ್ ಮಡಿಕೇರಿಗೆ ತೆರಳಿದ ಸಂದರ್ಭ ಕಳ್ಳತನ ನಡೆಸಿದ್ದಾರೆ. ಕಳುವು ಮಾಡಿದ ಕಾಫಿ ಯನ್ನು ಇಲ್ಲಿನ ದೊಡ್ಡ ಮಾವಿನ ಮರ ಜಂಕ್ಷನ್ ಬಳಿ ಇದ್ದ ಸಂದರ್ಭ ರೆಡ್ ಹ್ಯಾಂಡ್ ಆಗಿ ಸ್ಥಳೀಯ ಯುವಕರ ಕೈ ಗೆ ಸಿಕ್ಕಿ ಬಿದ್ದಿದ್ದು ವಿಚಾರಿಸಿದ ಸಂದರ್ಭ 41 ಕೆಜಿ ಅಷ್ಟು ಕಾಫಿ ಕಳುವಾಗಿರುವುದು ಬೆಳಕಿಗೆ ಬಂದಿದ್ದು,ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊನ್ನoಪೇಟೆ ಪೊಲೀಸರು ದಂಪತಿಗಳನ್ನು ಮಾಲು ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು