ಇತ್ತೀಚಿನ ಸುದ್ದಿ
Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪಾಣತ್ತೂರು ಬಳಿ ಪತ್ತೆ
21/07/2025, 12:52

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು -ಕೇರಳ ಗಡಿಯ ಮಂಜಡ್ಕ ನದಿಯಲ್ಲಿ ಕೊಚ್ಚಿಹೋದ ಯುವಕನ ಮೃತದೇಹ ಪಾಣತ್ತೂರು ಬಳಿ ಪತ್ತೆಯಾಗಿದೆ.
3 ದಿನಗಳ ಹಿಂದೆ ಕಾಸರಗೋಡಿನ ರಾಜಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜಡ್ಕ ನದಿಯಲ್ಲಿ ದುರ್ಗಪ್ಪ (19) ಎಂಬ ಯುವಕ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಈತ ಮೂಲತಃ ಬೆಳಗಾವಿ ಜಿಲ್ಲೆಯ ಸಿಂದೋಗಿ ಗ್ರಾಮದವನಾಗಿದ್ದಾನೆ. ಇದೀಗ
ಯುವಕನ ಮೃತದೇಹ ಪಾಣತ್ತೂರು ಬಳಿ ಪತ್ತೆಯಾಗಿದೆ. ಕೇರಳ ಅಗ್ನಿಶಾಮಕ ದಳ, ಪೊಲೀಸ್ , ಎನ್. ಡಿ. ಆರ್. ಎಫ್ ಹಾಗೂ ಸ್ಥಳೀಯರು ಶೋಧಕಾರ್ಯ ನಡೆಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತನ ಕುಟುಂಬಕ್ಕೆ ಮೃತದೇಹ ಹಸ್ತಾಂತರ ಮಾಡಲಾಯಿತು.