ಇತ್ತೀಚಿನ ಸುದ್ದಿ
Kodagu | ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ ಬಿತ್ತು 20 ಸಾವಿರ ಫೈನ್
08/11/2025, 09:49
ಮಡಿಕೇರಿ(reporterkarnataka com): ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಪ್ಪಿಗೆ ತಂದೆ ರೂ. 20 ಸಾವಿರ ದಂಡ ತೆತ್ತಿದ್ದಾರೆ. ಸೋಮವಾರಪೇಟೆಯ ಸಿ.ಆರ್. ಕುಮಾರಸ್ವಾಮಿ ಎಂಬುವವರು ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಅನ್ನು ಚಾಲನೆ ಮಾಡಲು ಕೊಟ್ಟಿದ್ದು, ಪೊಲೀಸರ ತಪಾಸಾಣೆ ವೇಳೆಯಲ್ಲಿ ಬಯಲಾಗಿತ್ತು. ಪೊಲೀಸ್ ವೃತ್ತ ನಿರೀಕ್ಷಕ ಮುದ್ದು ಮಾದೇವ ಅವರು ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ ಸೋಮವಾರಪೇಟೆ ಸಿವಿಲ್ ಜಡ್ಜ್ & JMFC ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕುಮಾರಸ್ವಾಮಿಗೆ ರೂ. 20ಸಾವಿರ ದಂಡ ವಿಧಿಸಿದ್ದಾರೆ.












