ಇತ್ತೀಚಿನ ಸುದ್ದಿ
ಕೊಡಗಿಗೆ ಎಂಟ್ರಿ ಕೊಟ್ಟ ಸುವಾಸನೆ ಭರಿತ ಬರ್ಮ ಅಕ್ಕಿ: ಬ್ಲ್ಯಾಕ್ ಬ್ಯುಟಿಯ ಪರಿಚಯಿಸಿದ ಕುಶಾಲನಗರದ ರೈತ
20/08/2025, 11:37

ಗಿರಿಧರ್ ಕೊಂಪುಳಿರ ಕುಶಾಲನಗರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲೇ ಪ್ರಗತಿ ಪರ ಕೃಷಿ ಮೂಲಕ ಹೆಸರು ಮಾಡಿರುವ ಕುಶಾಲನಗರ ತಾಲ್ಲೂಕಿನ ಹುಲಸೆ ಗ್ರಾಮದ ಪ್ರಗತಿ ಪರ ರೈತ ಹೆಚ್.ಎನ್. ಕಪನಪ್ಪ ತಮ್ಮ ಜಮೀನಿನಲ್ಲಿ ಚೀನಾ ಮೂಲದ ಬರ್ಮ ಬ್ಲಾಕ್ ರೈಸ್ ಬೆಳೆಯುವ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ಸಾವಯವ ಗೊಬ್ಬರದಿಂದ ವಿವಿಧ ತಳಿಯನ್ನು ಪರಿಚಯ ಮಾಡಿಕೊಂಡು ಬಂದಿರುವ ಕಪನಪ್ಪ ಉತ್ತರ ಭಾರತದ ತಳಿಯನ್ನು ಕೊಡಗು ಜಿಲ್ಲೆಗೆ ಪರಿಚಯಿಸಿದ್ದಾರೆ. ದಕ್ಷಿಣ ಭಾರತದ ಭಾಸ್ಮತಿ ಅಕ್ಕಿಯಂತೆ ವಿಶೇಷ ಸ್ಥಾನ ಪಡೆದಿರುವ ಈ ಬರ್ಮ ಅಕ್ಕಿ,ರುಚಿ ಮತ್ತು ಬಣ್ಣದಲ್ಲಿ ಭಿನ್ನವಾಗಿದೆ. ನೋಡುವುದಕ್ಕೆ ಹುಚೆಳ್ಳು ಕಂಡಂತೆ ಕಪ್ಪು ಬಣ್ಣದಲ್ಲಿರುವ ಈ ಅಕ್ಕಿ ಬೆಂದ ನಂತರ ಕಪ್ಪು ಬಣ್ಣದಲ್ಲೇ ಇರಲಿದ್ದು, ಅನ್ನ ಬೇಯುವಾಗಲೇ ಅನ್ನದ ಸುವಾಸನೆ ಹೊರ ಹೊರ ಮ್ಮುತ್ತದೆ. ಮಣಿಪುರ ರಾಜ್ಯದಿಂದ ತರಲಾದ ಈ ಭತ್ತದ ತಳಿಯನ್ನು ಹಂತ ಹಂತವಾಗಿ ತಮ್ಮ ಜಮೀನಿನಲ್ಲಿ ಸಸಿ ಮಡಿ ಸಿದ್ದಗೊಳಿಸಿ 13 ಎಕರೆ ಜಮೀನಿನಲ್ಲಿ ಪ್ರಯೋಗ ಮಾಡಿದ್ದಾರೆ. ತಮ್ಮ ಜಮೀನಿಗೆ ಕಾಲುವೆ ನೀರು ಸೌಲಭ್ಯ ಇದ್ದರೂ, ಈ ಭತ್ತಕ್ಕೆ ಕೊಳವೆ ಬಾವಿ ನೀರನ್ನೇ ಬಳಸುತ್ತಾರೆ. ನಾಟಿ ಮಾಡಿದ ಬಳಿಕ 5 ತಿಂಗಳು ಅರ್ಥತ್ 165 ದಿನಗಳಲ್ಲಿ ಈ ಭತ್ತ ಎಕರೆಗೆ 28ರಿಂದ 30 ಕ್ವಿoಟಲ್ ಇಳುವರಿ ನೀಡುತ್ತದೆ ಎನ್ನುತ್ತಾರೆ ರೈತ ಕಪನಪ್ಪ. *ತನ್ನದೇ ಮಾರುಕಟ್ಟೆ ನೆಟ್ವರ್ಕ್:* ಕೊಡಗು ಜಿಲ್ಲೆಗೆ ಬರ್ಮ ರೈಸ್ ಹೊಸತು ಆದರೂ,ಆನ್ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಬೆಂಗಳೂರಿನ ರೈತ ಉತ್ಪಾದಕರ ಸಂಸ್ಥೆ ಇವರಿಂದ ವಹಿವಾಟು ಆಧಾರದ ಮೇಲೆ ಕೆ.ಜಿಗೆ 200-300 ರೂ ಗಳಿಗೆ ಖರೀದಿಸುತ್ತಾರೆ. ಆನ್ಲೈನ್ ನಲ್ಲಿ ಕೆಜಿಗೆ 800ರ ವರೆಗೂ ಇದೆ ಎನ್ನುತ್ತಾರೆ ರೈತ ಕಮನಪ್ಪ. ಉತ್ತರ ಭಾರತದಲ್ಲಿ ವಿಶೇಷ ಸಂದರ್ಭದಲ್ಲಿ, ಸಭೆ ಸಮಾರಂಭದಲ್ಲಿ ಮಾತ್ರ ಬಳಕೆಯಾಗುವ ಈ ಅಕ್ಕಿ, ಕೊಡಗಿನಲ್ಲಿಯೂ ಪರಿಚಯ ಮಾಡಿರುವುದು ಒಂದು ಹೆಮ್ಮೆ.