ಇತ್ತೀಚಿನ ಸುದ್ದಿ
ಕೇವಲ 5 ರೂ. ಪಾವತಿಸಿ, ಎಷ್ಟು ಬೇಕಾದ್ರೂ ಸುತ್ತಾಡಿ: ಮೆಟ್ರೋದಿಂದ ಪ್ರಯಾಣಿಕರಿಗೆ ಸಖತ್ ಆಫರ್..!!
16/06/2022, 09:55
ಕೊಚ್ಚಿ(reporterkarnataka.com):
ಕೊಚ್ಚಿ ಮೆಟ್ರೋ ಜೂ.17ರಂದು ತನ್ನ 5ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂಭ್ರಮದ ಕ್ಷಣಗಳಲ್ಲಿ ತನ್ನ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಲು ನಿರ್ಧರಿಸಿದೆ. ಕೇವಲ 5 ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಲು ಮೆಟ್ರೋ ಅವಕಾಶ ನೀಡಿದೆ.
ಪ್ರಯಾಣಕ್ಕೆ ಅನುಕೂಲ ಮಾಡಿ, ಸಾರ್ವಜನಿಕ ಸಾರಿಗೆ ಅಭ್ಯಾಸ ಮಾಡಿ-ಕೊಚ್ಚಿ ಮೆಟ್ರೊ ಎಂಬ ಟ್ಯಾಗ್ ಮೂಲಕ ಈ ಮಾಹಿತಿಯನ್ನು ಕೊಚ್ಚಿ ಮೆಟ್ರೋ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ’ಜೀವನ ತುಂಬಾ ಸುಲಭ’ ಎಂಬ ಶೀರ್ಷಿಕೆ ಹಾಕಿಕೊಂಡಿದೆ.
ಅಂದಹಾಗೆ ಹೆಚ್ಚಿನ ಪ್ರಯಾಣಿಕರಿಗೆ ಮೆಟ್ರೋವನ್ನು ಪರಿಚಯಿಸುವುದು ಮತ್ತು ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಮೆಟ್ರೋ ಈ ಹೊಸ ಹೆಜ್ಜೆ ಇರಿಸಿದೆ.














