8:04 AM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಕೇವಲ 24 ತಾಸಿನೊಳಗೆ ಮಾತು ಬದಲಾಯಿಸಿದ ಸ್ವಾಮೀಜಿ!: ನಿನ್ನೆ ಕುಮಠಳ್ಳಿ ಪರ!, ಇಂದು ಸವದಿ ಪರ!

08/04/2023, 20:54

ರಾಹುಲ್ ಅಥಣಿ ಬೆಳಗಾವಿ

info.reporterkarnataka gmail.com): ಧರ್ಮಕ್ಕೂ ರಾಜಕೀಯಕ್ಕೂ ಬಹಳ ನಂಟು. ಸ್ವಾಮೀಜಿಗಳು, ಪೀಠಾಧಿಪತಿಗಳು ರಾಜಕಾರಣಿಗಳನ್ನು ಬೆಂಬಲಿಸುವುದು, ಅವರ ಪರವಾಗಿ ಸಭೆ ನಡೆಸುವುದು ಮಾಮೂಲಿಯಾಗಿ ಹೋಗಿದೆ. ಹಾಗೆ ಸ್ವಾಮೀಜಿಯವರೊಬ್ಬರು 24 ತಾಸಿನೊಳಗೆ ಮಾತು ಬದಲಾಯಿಸಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಪಂಚಮಸಾಲಿ ಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯ ಶ್ರೀಗಳು ನಿನ್ನೆ ದಿನ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಪರ ಬ್ಯಾಟಿಂಗ್ ನಡೆದಿದ್ದರು. ಆದರೆ ಇವತ್ತು ಉಲ್ಟಾ ಹೊಡೆದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪರ ಹೇಳಿಕೆ ನೀಡಿದ್ದಾರೆ. ದಿನಕ್ಕೊಂದುದು ಹೇಳಿಕೆ ನೀಡುವ ಮೂಲಕ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅವರು ಭಕ್ತರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ವಾಮೀಜಿ ದ್ವಂದ್ವ ನಿಲುವು ಪ್ರಕಟಿಸಿದ್ದಾರೆ.
ಲಕ್ಷ್ಮಣ ಸವದಿ ಅವರು ಇತ್ತಿಚೆಗೆ ಅಥಣಿಯಲ್ಲಿ ಮಾತನಾಡಿ ಪಂಚಮಸಾಲಿ ನನ್ನ ಬೆನ್ನಿಗೆ ಇದೆ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಸ್ವಾಮೀಜಿಯವರು ನಿನ್ನೆ ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅಲ್ಲಿ ಮಹೇಶ ಕುಮಠಳ್ಳಿ ಪರವಾಗಿ ಪಂಚಮಸಾಲಿ ಸಮಾಜ ಇದೆ ಎಂದು ಹೇಳಿದ್ದರು.
ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಶುಕ್ರವಾರ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಆಶ್ರಯದಲ್ಲಿ 20ಕ್ಕೂ ಅಧಿಕ ಶ್ರೀಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸ್ವಾಮೀಜಿ ಈ ಹೇಳಿಕೆ ನೀಡಿದ್ದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ನಮ್ಮ ಸಮಾಜದ ಮುಖಂಡರಿಗೆ ಟಿಕೇಟ್ ನೀಡುತ್ತಿವೆ. ನಮ್ಮ ಸಮಾಜ ಜನರು ಮೊದಲು ನಮ್ಮ ಸಮಾಜದ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತು ಸಮಾಜದವರನ್ನು ಬೆಳೆಸಬೇಕು. ಅದೇ ರೀತಿ ಯಾರೋ ಕೆಲವು ಜನರನ್ನು ಕೇಳಿ ಇಡೀ ಸಮಾಜ ನಮ್ಮ ಬೆಂಬಲಕ್ಕೆ ಇದೆ ಎಂದು ಅವರು ಹೇಳಿಕೆ ಕೊಡುತ್ತಿರುವುದು ಅವರಿಗೆ ಶೋಭೆ ತರುವಂತಹದುಲ್ಲ ಎಂದು ಹೇಳಿದರು. ಈ ವೇಳೆ ಬೆಂಗಳೂರಿನ ಆರೂಢ ಭಾರತಿ ಶ್ರೀಗಳು, ರಾಮೋಹಳ್ಳಿಯ ಸಿದ್ಧಲಿಂಗ ಶ್ರೀಗಳು, ದತ್ತಪೀಠದ ಬಾಪೂಜಿ ಶ್ರೀಗಳು, ಕುಂಚನೂರಿನ ಕಮರಿಮಠದ ಸಿದ್ಧಲಿಂಗ ದೇವರು, ವಿಜಯಪುರ ಯೊಗೇಶ್ವರಿ ಮಾತಾಜಿ, ಹಿಪ್ಪರಗಿಯ ಸಿದ್ಧಾರೂಡ ಶ್ರೀ, ಸಿರಬೂರಿನ ಕಲ್ಮೇಶ್ವರ ಮಹಾರಾಜರು, ನವಲಗುಂದದ ಬಸವಾನಂದ ಶ್ರೀಗಳು, ಗೋಕಾಕಿನ ಗುರುಬಸವ ಶ್ರೀಗಳು ಸೇರಿದಂತೆ ಇತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು