ಇತ್ತೀಚಿನ ಸುದ್ದಿ
ಕೆಟ್ಟು ನಿಂತ ಬಸ್ಸಿಗೆ ಅಪರಿಚಿತ ವಾಹನ ಡಿಕ್ಕಿ: ಕೆಎಸ್ಸಾರ್ಟಿಸಿ ಕಂಡೆಕ್ಟರ್ ದಾರುಣ ಸಾವು; ಸಿಬ್ಬಂದಿಗಳಿಂದ ಪ್ರತಿಭಟನೆ
21/11/2024, 20:20

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಕೆಟ್ಟು ನಿಂತಿದ್ದ ಬಸ್ಸಿನ ಚಾಲಕರಿಗೆ ಕಿಟಕಿ ಮೂಲಕ ಊಟ ಕೊಡುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಂಡೆಕ್ಟರ್ ಸಾವನ್ನಪ್ಪಿದ ದಾರುಣ ಘಟನೆ ನಡೆಯಿತು.
ಅಪಘಾತದಲ್ಲಿ ಕಂಡಕ್ಟರ್ ಅವರನ್ನು ಶ್ರೀನಾಥ್ (40) ಎಂದು ಗುರುತಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮೃತದೇಹವಿಟ್ಟು ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ನಿನ್ನೆ ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗಿದ್ದ ಸರ್ಕಾರಿ ಬಸ್ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಕೆಟ್ಟು ನಿಂತಿತ್ತು. ಬೆಳಗ್ಗೆ 9 ಗಂಟೆಗೆ ಕೆಟ್ಟ ಬಸ್, ಮೆಕಾನಿಕ್ ಹೋಗಿದ್ದು ರಾತ್ರಿ 9 ಗಂಟೆಗೆ. ಬಸ್ ರಿಪೇರಿ ಮಾಡುವಾಗ ಡ್ರೈವರ್ ಗೆ ಕಿಟಕಿಯಿಂದ ಊಟ ಕೊಡಲು ಕಂಡಕ್ಟರ್ ಹೋದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಕಂಡಕ್ಟರ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹವನ್ನು ಡಿಪೋದಲ್ಲಿಟ್ಟು ದಲಿತ ಸಂಘಟನೆಗಳು ಪ್ರತಿಭಟನೆಗಳು ಪ್ರತಿಭಟನೆ ನಡೆಸಿದವು.