ಇತ್ತೀಚಿನ ಸುದ್ದಿ
ಕೆಸರುಗದ್ದೆಯಾದ ಚಳ್ಳಕೆರೆ ವಾರದ ಸಂತೆ ಮೈದಾನ: ತಕ್ಷಣ ದುರಸ್ತಿಗೆ ಶಾಸಕರ ಸೂಚನೆ
21/11/2021, 16:08
ಗೋಪನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿರುವ ಜತೆಗೆ ಚಳ್ಳಕೆರೆಯಲ್ಲಿ ವಾರದ ಸಂತೆಯಾಗುವ ಮೈದಾನ ಕೆಸರು ಗದ್ದೆಯಾಗಿದ್ದು ಕೂಡಲೆ ಅಧಿಕಾರಿಗಳು ಸರಿಪಡಿಸುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ಕೆಸರು ಗದ್ದೆಯಾದ ವರದ ಸಂತೆ ಮೈದಾನ ಸಾರ್ವಜನಿಕರು ಹಾಗೂ ವರ್ತಕರು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿ ಶಾಸರಿಗೆ ದೂರು ನೀಡಿದ ಬೆನ್ನಲ್ಲೇ ಬೆಳ್ಳಂ ಬೆಳಗ್ಗೆ ವಾರದ ಸಂತೆ ಮೈದಾನಕ್ಕೆ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂತೆ ಮೈದಾನದಲ್ಲಿ ವರ್ತಕರು ವ್ಯಾಪಾರ ಮಾಡುವ ಸ್ಥಳಕ್ಕೆ ಹೊಂದಿಕೊಂಡಿರುವ ಶಿಥಿಲವಾದ ಕಟ್ಟಡಗಳನ್ನು ಕೂಡಲೆ ತೆರವುಗೊಳಿಸಿ ಸಂತೆ ಮೈದಾನಕ್ಕೆ ಜಲ್ಲಿ, ಮಣ್ಣು ಹಾಕಿ ನೀರು ನಿಲ್ಲದಂತೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರಭೆ ಪೌರಾಯುಕ್ತ ಪಾಲಯ್ಯ ಮಾತನಾಡಿ ಬಾಡಿಗೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅವುಗಳ ತೆರವಿಗೆ ಅಡ್ಡಿಯಾಗಿದೆ. ಈ ದಿನವೇ ಸಂತೆ ಮೈದಾನಕ್ಕೆ ಮಣ್ಣು ಹಾಗೂ ಜಲ್ಲಿ ಹಾಕಿಸಿ ನೀರು ನಿಲ್ಲದಂತೆ ಮಾಡಲಾಗುವುದು ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಸರಕಾರಿ ವಾಣಿಜ್ಯ ಮಳಿಗೆಗಳನ್ನು ಖಾಸಗಿಯವರು ಕೋರ್ಟ್ ಗೆ ಹಾಕಿದ ತಕ್ಷಣ ಸುಮ್ಮನೆ ಕೈಕಟ್ಟಿ ಕೂರುವ ಬದಲು ಜನರ ಮೇಲೆ ಗೋಡೆ ಬಿದ್ದು ಪ್ರಾಣ ಕಳೆದುಕೊಳ್ಳುವ ಮುನ್ನ ನುರಿತ ವಕೀಲರ ಮೂಲಕ ನ್ಯಾಯಾದಲ್ಲಿ ಪ್ರಕರಣ ಇತ್ಯರ್ಥ ಮಾಡಿ ಶಿಥಿಲವಾದ ಕಟ್ಟಡಗಳನ್ನು ನೆಲಸಮ
ಮಾಡಬೇಕು. ಪ್ರಮುಖ ರಸ್ತೆ ಸೇರಿದಂತೆ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ರಾಜಕಾಲುವೆ, ಚರಂಡಿಗಳಲ್ಲಿನ ಹೂಳು ತೆಗೆಸಿ ನೀರು ಸರಾಗವಾಗಿ ಚರಂಡಿ ಮೂಲಕ ಹರಿಯುವಂತೆ
ಮಾಡಬೇಕು ಎಂದರು.
ನಗರದ ವಿವಿಧ ಬಡಾವಣೆಗೆಳಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಕೆರೆ, ಕಾಲುವೆ, ಚೆಕ್ ಡ್ಯಾಂ, ವೇದಾವತಿ ನದಿಯಲ್ಲಿ ನೀರು ಹರಿಯುತ್ತಿದ್ದು, ನೀರು ಹರಿಯುವ ಸ್ಥಳಗಳ ಸಮೀಪದ ಜನರು ತಮ್ಮ ಮಕ್ಕಳನ್ನು ನೀರಿನ ಬಳಿ ಬಿಡದಂತೆ ಹಾಗೂ ಶಿಥಿಲವಾದ ಮನೆಗಳಲ್ಲಿ ಯಾರು ವಾಸ ಮಾಡಬಾರದು ಶಿಥಿಲವಾದ ಕಟ್ಟಗಳಲ್ಲಿ ವಾಸ ಮಾಡುವ ಕುಟುಂಬಗಳಿಗೆ ಶಾಲೆ, ಸಮುದಾಯ ಭವನಗಳಲ್ಲಿ ತಾತ್ಕಲಿಕವಾಗಿ ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಸದಸ್ಯರಾದ ಎಂ.ಜೆ.ರಾಘವೇಂದ್ರ, ವೀರಭದ್ರಪ್ಪ, ಮಂಜುಳ ಪ್ರಸನ್ನಕುಮಾರ್, ಇಂಜಿಯರ್ ಲೋಕೇಶ್ ಸೇರಿದಂತೆ ಇತರರಿದ್ದರು.