5:21 PM Sunday9 - November 2025
ಬ್ರೇಕಿಂಗ್ ನ್ಯೂಸ್
ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ

ಇತ್ತೀಚಿನ ಸುದ್ದಿ

ಕೇರಳ ಸರಕಾರ ಹಾಗೂ ರಾಜ್ಯಪಾಲರ ನಡುವೆ ಶೀತಲ ಸಮರ: 11 ಸುಗ್ರೀವಾಜ್ಞೆಗಳಿಗೆ ಸಹಿ ಹಾಕದೆ ವಾಪಸ್

11/08/2022, 10:46

ತಿರುವನಂತಪುರ(reporterkarnataka.com);ಕೇರಳ ರಾಜ್ಯಪಾಲರು 11 ಸುಗ್ರೀವಾಜ್ಞೆಗಳಿಗೆ ಸಹಿ ಹಾಕದೆ ವಾಪಸ್ ಕಳುಹಿಸುವುದರೊಂದಿಗೆ ಕೇರಳದಲ್ಲಿ ಸರಕಾರ ಮತ್ತು ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ನಡುವೆ ಶೀತಲ ಸಮರ ಮುಂದುವರಿದಿದೆ. ಇದರೊಂದಿಗೆ ವಿಶೇಷ ಅಧಿವೇಶನಕ್ಕೆ ಕೇರಳ ಸರಕಾರ ಮೊರೆ ಹೋಗಿದೆ.

ರಾಜ್ಯಪಾಲರ ಅಂಕಿತ ಸಿಗದ ಹಿನ್ನೆಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇವುಗಳನ್ನು ಪಾಸ್​ ಮಾಡಿಕೊಳ್ಳಲೆಂದೇ​ ವಿಶೇಷ ಅಧಿವೇಶನ ಕರೆದಿದೆ.

ಎರಡು ದಿನಗಳ ಹಿಂದೆ ರಾಜ್ಯಪಾಲರ ಅಂಕಿತಕ್ಕಾಗಿ ಸರ್ಕಾರ ಸುಗ್ರೀವಾಜ್ಞೆಗಳನ್ನು ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲ ಯಾವುದೇ ದಾಖಲೆಗಳನ್ನು ಓದದೆ ಸಹಿ ಹಾಕಲು ನಿರಾಕರಿಸಿದ್ದರು. ಹೀಗಾಗಿಯೇ ಮರು ಪ್ರಕಟಣೆಯಾಗಬೇಕಿದ್ದ ಸುಗ್ರೀವಾಜ್ಞೆಗಳು ರದ್ದಾಗಿವೆ.

ಇದೀಗ ರಾಜ್ಯಪಾಲರಿಗೆ ಸೆಡ್ಡು ಹೊಡೆದಿರುವ ಪಿಣರಾಯಿ ಸರ್ಕಾರ ಸಚಿವ ಸಂಪುಟ ಸಭೆ ಕರೆದು, 10 ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಈ ಅಧಿವೇಶನದಲ್ಲಿ ಮಸೂದೆಗಳನ್ನು ಮಂಡಿಸಿ ಸದನದಲ್ಲೇ ಅಂಗೀಕಾರ ಪಡೆಯುವ ಉದ್ದೇಶ ಸರ್ಕಾರದ್ದು. 140 ಸದಸ್ಯ ಬಲದ ವಿಧಾನಸಭೆಯಲ್ಲಿ 99 ಸದಸ್ಯರು ಆಡಳಿತಾರೂಢ ಎಡಪಕ್ಷಗಳಿಗೆ ಸೇರಿದ್ದು, ಈ ಎಲ್ಲ ಮಸೂದೆಗಳು ಕ್ಷಣಾರ್ಧದಲ್ಲಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.

ಇತ್ತ, ಅಧಿವೇಶನ ನಡೆಸುವ ಬಗ್ಗೆ ರಾಜ್ಯಪಾಲರಿಗೆ 14 ದಿನಗಳು ಮುಂಚಿತವಾಗಿ ನೋಟಿಸ್​ ನೀಡಬೇಕು. ಹೀಗಾಗಿಯೇ ಸ್ಪೀಕರ್​ ಜೊತೆ ಚರ್ಚಿಸಿ ಸರ್ಕಾರ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು