ಇತ್ತೀಚಿನ ಸುದ್ದಿ
ಕೇರಳ ಸಮುದ್ರದಲ್ಲಿ ಸಿಕ್ಕಿತು ತಿಮಿಂಗಿಲ ವಾಂತಿ!: ಇದರ ಬೆಲೆ ಬರೋಬ್ಬರಿ 28 ಕೋಟಿ!!
24/07/2022, 08:06

ತಿರುವನಂತಪುರ(reporterkarnataka.com) ಕೇರಳ ಸಮೀಪದ ವಿಝಿಂಜಂನಲ್ಲಿ ಮೀನುಗಾರರ ಗುಂಪು 28 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲದ ಅಂಬರ್ ಗ್ರಿಸ್ ಅಥವಾ ವಾಂತಿಯನ್ನು ಪತ್ತೆ ಮಾಡಿದೆ.
ತಿಮಿಂಗಿಲದ ಈ ವಾಂತಿ ಬರೋಬ್ಬರಿ 28 ಕೆಜಿ 400 ಗ್ರಾಂ ತೂಕವಿತ್ತು. ಮೀನುಗಾರರು ಸಮುದ್ರದ ದಡಕ್ಕೆ ಎಳೆದು ತಂದಿದ್ದಾರೆ. ಅದನ್ನು ಕೂಡಲೇ ಕರಾವಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಧಿಕಾರಿಗಳು ತಿಮಿಂಗಿಲ ಹೊರಹಾಕಿದ್ದನ್ನು ವಶಕ್ಕೆ ಪಡೆದಿದ್ದಾರೆ. ಅದು ತಿಮಿಂಗಿಲದ ವಾಂತಿ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜೀವ್ ಗಾಂಧಿ ಸೆಂಟರ್ ಆಫ್ ಬಯಾಟೆಕ್ನಾಲಜಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ತಿಮಿಂಗಿಲದ ವಾಂತಿಯನ್ನು ಸುಗಂಧ ದ್ರವ್ಯಗಳ ತಯಾರಿಕೆಗೆ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ವಾಂತಿಯ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ. ಆದ್ರೆ ಭಾರತದಲ್ಲಿ ತಿಮಿಂಗಿಲದ ವಾಂತಿಯನ್ನು ಖರೀದಿ ಅಥವಾ ಮಾರಾಟ ಮಾಡದಂತೆ ನಿಷೇಧಿಸಲಾಗಿದೆ.