ಇತ್ತೀಚಿನ ಸುದ್ದಿ
ಕೇರಳದಲ್ಲಿ ಸತತ 2ನೇ ಬಾರಿ ಎಡರಂಗ ಅಧಿಕಾರಕ್ಕೆ: ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರತಿಜ್ಞೆ ಸ್ವೀಕಾರ
20/05/2021, 16:09
ತಿರುವನಂತಪುರ(reporterkarnataka news): ಕೇರಳ ಎಡರಂಗ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಗುರುವಾರ ಪ್ರತಿಜ್ಞೆ ಸ್ವೀಕರಿಸಿದರು.
ಸತತ ಎರಡನೇ ಬಾರಿ ಕೇರಳದಲ್ಲಿ ಎಡರಂಗ ಸರಕಾರ ಅಧಿಕಾರಕ್ಕೆ ಬಂದಿದೆ. ಕೇರಳದ ಸಂಪ್ರದಾಯದಂತೆ ಒಂದು ಅವಧಿಗೆ ಎಲ್ ಡಿಎಫ್ ಅಧಿಕಾರಕ್ಕೆ ಬಂದರೆ ಇನ್ನೊಂದು ಅವಧಿಗೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿತ್ತು. ಕೇರಳದ ಮತದಾರರು ಬಹಳ ಬುದ್ಧಿವಂತಿಕೆಯಿಂದ ಸರಕಾರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಎಡರಂಗ (ಎಲ್ ಡಿಎಫ್) ಸತತ ಎರಡನೇ ಬಾರಿ ಆಯ್ಕೆಯಾಗುವ ಮೂಲಕ ಪಿಣರಾಯಿ ವಿಜಯನ್ ಅವರ ಜನಪ್ರಿಯತೆ ಹೆಚ್ಚಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.