5:10 PM Sunday22 - February 2026
ಬ್ರೇಕಿಂಗ್ ನ್ಯೂಸ್
ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ

ಇತ್ತೀಚಿನ ಸುದ್ದಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ: ಪಂಚಾಮೃತ ಮಹಾಭಿಷೇಕ ಸಮರ್ಪಣೆ

28/12/2022, 17:26

ಕುಕ್ಕೆ ಸುಬ್ರಹ್ಮಣ್ಯ(reporterkarnataka.com): ಬಿಜೆಪಿಯ ಫೈಯರ್ ಬ್ರಾಂಡ್ ನಾಯಕಿ,
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಂಕಲ್ಪ ನೆರವೇರಿಸಿದ ಬಳಿಕ ಸಚಿವೆ ಕುಟುಂಬ ಸಮೇತ
ದೇವರ ದರುಶನ ಪಡೆದರು. ಪಂಚಾಮೃತ ಮಹಾಭಿಷೇಕ ಸೇವೆ ಸಮರ್ಪಿಸಿದರು. ಸಚಿವೆ ಮಧ್ಹಾಹ್ನ ದೇವರ ಮಹಾಪೂಜೆ
ವೀಕ್ಷಿಸಿ ಸೇವೆ ನೆರವೇರಿಸಿದರು.

ದೇವಳದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ಅವರು ಸಚಿವರಿಗೆ ಶಾಲು ಮತ್ತು ದೇವರ ಮಹಾಪ್ರಸಾದ ನೀಡಿದರು.
ನಂತರ ಸಚಿವೆ ಹೊಸಳಿಗಮ್ಮನ ದರ್ಶನ ಪಡೆದರು. ಬಳಿಕ ದೇವಳದಲ್ಲಿ ಭೋಜನ ಸ್ವೀಕರಿಸಿದರು. ನಂತರ ಆಡಳಿತ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಶಾಲು ಹೊದಿಸಿ ದೇವರ ಮಹಾಪ್ರಸಾದ ನೀಡಿ ಗೌರವಿಸಿದರು. ಬ್ರಹ್ಮರಥ ಎಳೆದ ಪವಿತ್ರ ಬೆತ್ತವನ್ನು ಸಚಿವರಿಗೆ ನೀಡಿದರು. ಬಳಿಕ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ಸಚಿವರು ದೇವರ ದರುಶನ ಪಡೆದು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು.

ಕುಕ್ಕೆ ಕ್ಷೇತ್ರದಲ್ಲಿ ಸೇವೆ ನೆರವೇರಿಸಲು ಸಲುವಾಗಿಯೇ ಸಚಿವರ ದೆಹಲಿಯಿಂದ ಆಗಮಿಸಿದರು. ಬೆಳಗ್ಗೆ 9 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿ ಸಂಕಲ್ಪ ವಿದಿ ವಿಧಾನ ನೆರವೇರಿಸಿ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. 1 ಗಂಟೆಗೂ ಅಧಿಕ ಕಾಲ ದೇವರ ಪಂಚಾಮೃತ ಮಹಾಭಿಷೇಕ ವೀಕ್ಷಿಸಿದರು.

ಸಚಿವೆ ಜತೆಗೆ ಅವರ ಪತಿ ಜುಬಿನ್ ಇರಾನಿ ಮತ್ತು ಪುತ್ರಿ ಜೋಯಿಸ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು