ಇತ್ತೀಚಿನ ಸುದ್ದಿ
ಕಾವೂರು ವಾರ್ಡ್: 1.3 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ
02/01/2023, 14:14

ಸುರತ್ಕಲ್(reporterkarnataka.com): ಸುಮಾರು 1.3 ಕೋಟಿ ರೂ. ವೆಚ್ಚದಲ್ಲಿ ಕಾವೂರು ವಾರ್ಡ್ 18ರಲ್ಲಿ ವಿವಿಧ ರಸ್ತೆ ಅಭಿವೃದ್ಧಿ , ತಡೆಗೋಡೆ ನಿರ್ಮಾಣ , ಒಳಚರಂಡಿ ಪೈಪ್ ಲೈನ್ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ. ಗುದ್ದಲಿ ಪೂಜೆಯನ್ನು ಅಂಬೇಡ್ಕರ್ ನಗರದಲ್ಲಿ ನೆರವೇರಿಸಿದರು.
ಮನಪಾ ಸದಸ್ಯೆ ಗಾಯತ್ರಿ ಎ. ರಾವ್, ಬಿಜೆಪಿ ಉತ್ತರ ಮಂಡಲ ಎಸ್. ಸಿ. ಮೋರ್ಚಾ ಅಧ್ಯಕ್ಷ ಆನಂದ ಪಾಂಗಳ, ಮಂಡಲ ಉಪಾಧ್ಯಕ್ಷರಾದ ಬಬಿತಾ ರವೀಂದ್ರ, ಮಂಡಲ ಕಾರ್ಯದರ್ಶಿ ವನಿತಾ, ಯುವ ಮೋರ್ಚಾ ಜಿಲ್ಲಾ ಖಜಾಂಚಿ ರಕ್ಷಿತ್ ಪೂಜಾರಿ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ,ಶಕ್ತಿ ಕೇಂದ್ರದ ಪ್ರಮುಖ್ ಶೇಖರ್ ಕುಲಾಲ್, ಪ್ರಮುಖರಾದ ಜಗದೀಶ್ ಅಂಚನ್ , ಸಂದೇಶ್ ಶೆಟ್ಟಿ, ಅಶ್ವಿನ್ ಅಮೀನ್, ಶಾಲಿನಿ ಅಮೀನ್, ಉಮೇಶ್ ಪೂಜಾರಿ, ಮಹೇಶ್ ಅಮೀನ್, ಅಶೋಕ್, ಚಂದ್ರಶೇಖರ್ ದೇವಾಡಿಗ,ಸುಂದರ, ಬೂತ್ ಅಧ್ಯಕ್ಷರಾದ ಹರೀಶ್ ದೇವಾಡಿಗ, ಶಿವಾನಂದ ಪೂಜಾರಿ, ಜಯರಾಮ್ ಕೋಟ್ಯಾನ್, ಸ್ಥಳೀಯ ನಿವಾಸಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.