1:31 AM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ…

ಇತ್ತೀಚಿನ ಸುದ್ದಿ

ಕತ್ತಲಾದರೆ ಮಾತ್ರ ಇಲ್ಲಿ ಶೌಚ ಸಾಧ್ಯ!!: ರಸ್ತೆಯ ಇಕ್ಕೆಲೆಗಳೇ ಓಪನ್ ಟಾಯ್ಲೆಟ್; ಇದು ಶಿವಪುರ ಗೊಲ್ಲರಹಟ್ಟಿಯ ಕರುಣಾಜನಕ ಕಥೆ!

18/09/2021, 14:44

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಒಂದು ಕಡೆ ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತದ ಕುರಿತು ಮಾಧ್ಯಮಗಳ ಮೂಲಕ ಪ್ರಚಾರ ನೀಡಲಾಗುತ್ತಿದೆ. ಇನ್ನೊಂದು ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರ‍‍ಾಮ ಸ್ವಚ್ಛತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಅವೆಲ್ಲಾ ಕೇವಲ ಲೆಕ್ಕಪತ್ರ ಹಾಗೂ ಪ್ರಚಾರಕ್ಕೆ ಮಾತ್ರ

ಸೀಮಿತ ಎಂಬುದಕ್ಕೆ ಶಿವಪುರ ಗ್ರಾಮ ಪಂಚಾಯಿತಿಯ ಬಹುತೇಕ ಗ್ರಾಮಗಳ ಅವ್ಯವಸ್ಥೆಗಳೇ ಸಾಕ್ಷಿಯಾಗಿವೆ.

ಅಚ್ಚರಿಯಂದ್ರೆ ಈ ಗ್ರಾಮ ಪಂಚಾಯಿತಿ ಸತತ ಎರೆಡು ಬಾರಿ ರಾಜ್ಯಮಟ್ಟದ “ಮಹಾತ್ಮ ಗಾಂಧಿ ಮಾದರಿ ಗ್ರಾಮ ಪಂ”ಎಂಬ ಪ್ರಶಸ್ತಿಗೆ

ಪಾತ್ರವಾಗಿದೆ. ಗ್ರಾಪಂ ಕೇಂದ್ರ ಸ್ಥಾನದಿಂದ ಕೂಗಳತೆ ದೂರದಲ್ಲಿರುವ ಶಿವಪುರ ಗೊಲ್ಲರಹಟ್ಟಿ ಗ್ರಾಮದ ಗಲ್ಲಿಗಳು ನೈರ್ಮಲ್ಯತೆ ಕಾಣದೇ ಕೊಳೆತು ನಾರುತ್ತಿವೆ. ಬಚ್ಚಲ ಮೋರಿಯ ತ್ಯಾಜ್ಯ ನೀರು ರಸ್ತೆಗಳಲ್ಲಿ ಹರಿದಾಡಿ ಕೆಸರು ಗದ್ದೆಗಳಾಗಿವೆ. ಶೌಚಾಲಯ ಕೊರತೆಯಿಂದಾಗಿ ರಸ್ತೆಗಳ ಇಕ್ಕೆಲದ ಜಾಗವೇ ಬಯಲು ಶೌಚಾಲಯವಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಶೌಚ ಮಾಡುವುದು ಸಾಮಾನ್ಯವಾಗಿದೆ. ಬಚ್ಚಲ ಮೋರಿಯ ನೀರು ರಸ್ಥೆಗಳಲ್ಲಿ ಹರಿದಾಡುತ್ತಿದ್ದು, ಪಾದಾಚಾರಿಗಳು ಕೆಸರು ಗದ್ದೆಯಂತಾದ ರಸ್ತೆಗಳಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ. ಗ್ರಾಮದ ಬಹುತೇಕ ರಸ್ತೆಗಳು ಒತ್ತುವರಿಯಾಗಿದ್ದು,  ಬೈಕ್ ಗಳಲ್ಲಿ ತೆರಳುವವರು ಕಿರಿದಾದ ರಸ್ತೆಗಳಲ್ಲಿ ಸಂಚರಿಸಲು ನಿತ್ಯ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ಅಯಾ ತಪ್ಪಿದರೆ ರಸ್ತೆಯಲ್ಲಿಯ ಕೆಸರು ಗುಂಡಿಯಲ್ಲಿ ಮಿಂದೇಳುವುದು ಖಂಡಿತ.

ಕನಿಷ್ಠ  ನೈರ್ಮಲ್ಯತೆ ಕಾಣದ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳು ದೊರೆಯದ ಕಾರಣ, ಗ್ರಾಮದ ಮಹಿಳೆಯರಿಂದ ರಸ್ತೆಯ ಇಕ್ಕೆಲೆಗಳಲ್ಲಿಯೇ ನಿತ್ಯ ಬಹಿರ್ದೆಸೆ ಜರುಗುತ್ತಿದೆ.

ಇದಕ್ಕೆಲ್ಲ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಯ  ಹೊಣೆಗೇಡಿತ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯತೆ ಕಾಣದಾಗಿದೆ ಮತ್ತು ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು ಇದಕ್ಕೆ ಸಂಬಂಧಿಸಿದ ಇಲಾಖೆಗಳ ಉನ್ನತಾಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಆರೋಪಿಸಿದೆ.

ಶೀಘ್ರವೇ ತಾಪಂ ಕಾರ್ಯನಿರ್ವಹಣಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಜರುಗಿಸಬೇಕಿದೆ. ಈ ನಿಟ್ಟಿನಲ್ಲಿ ದಕ್ಷತೆಗೆ ಹೆಸರಾಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಂದಿನಿ ಹಾಗೂ ಜಿಲ್ಲಾಧಿಕಾರಿ ಪವನ ಕುಮಾರ ಮಾಲಿಪಟೇಲ್  ಅವರು ಶೀಘ್ರವೇ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಒತ್ತಾಯಿಸಿದ್ದಾರೆ.

ನಿರ್ಲಕ್ಷ್ಯಸಿದ್ದಲ್ಲಿ ಅಧಿಕಾರಿಗಳ ಅಮಾನವೀಯ ನಡೆಯ ವಿರುದ್ಧ ಕಾನೂನು ಸಮರ ಸಾರಲಾಗುವುದು. ಮಹಿಳಾ ಆಯೋಗ ಹಾಗೂ ಮಹಿಳಾ ಆಯೋಗ ಮತ್ತು ನ್ಯಾಯಾಂಗ ಇಲಾಖೆಗೆ ದೂರು ನೀಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ. 

ಬಹಿರ್ದೆಸೆಗೆ ಕತ್ತಲಾಗಬೇಕು: ಶಿವಪುರ ಗೊಲ್ಲರಹಟ್ಟಿಯ ಗ್ರಾಮದಲ್ಲಿ ಶೌಚಕ್ಕೆ ತೆರಳಲು ಮಹಿಳೆಯರು ಕತ್ತಲಾಗುವುದನ್ನ ಕಾಯಲೇ ಬೇಕಿದೆ. ಇಲ್ಲಿ ಶೌಚಕ್ಕೆ ಹೋಗಲು ಸಮಯ ನಿಗದಿಯಾಗಿರುತ್ತೆ ಅಂದ್ರೆ ಕತ್ತಲಾಗಬೇಕಿದೆ ಅಂದಾಗ ಮಾತ್ರ ಶೌಚಕ್ಕೆ ತೆರಳಬೇಕಿದೆ. ಇದು ಅಮಾನವೀಯ ಹಾಗೂ ಅನಾಗರೀಕತೆಗೆ ಜೀವಂತ ಸಾಕ್ಷಿಯಾಗಿದೆ,ಲ. ಹೆಂಗಸರು ರಾತ್ರಿಯಿಂದ ಬೆಳಕು ಮೂಡುವವರಿಗೆ ಮಾತ್ರ  ಶೌಚಕ್ಕೆ ತೆರಳಲು ಸಾಧ್ಯ,ಲ. ಯೋಗ್ಯ ಶೌಚಾಲಯ ವ್ಯವಸ್ಥೆ ಗೊಲ್ಲರಹಟ್ಟಿ ಗ್ರಾಮದಲ್ಲಿಲ್ಲ.

ರಸ್ತೆಯ ಇಕ್ಕೆಲಗಳಲ್ಲಿ ಶೌಚಕ್ಕೆ ಕುಳಿತಿರುತ್ತಾರೆ. ರಸ್ತೆಯಲ್ಲಿ ವಾಹನ ಸಂಚಾರ ಸಹಜ. ಆಗ ಶೌಚಕ್ಕೆ ಕುಂತಿರುವವರು ಎದ್ದೇಳಬೇಕಾಗುತ್ತದೆ. ಇಂತಹ ಹೀನಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲಾ ಕಾಂಪೌಂಡನ್ನೇ ಮರೆಯಾಗಿ ಆಸರೆಯಾಗಿರಿಸಿಕೊಂಡು ಮಹಿಳೆಯರು ಬಹಿರ್ದೆಸೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ,ಯೋಗ್ಯ ಶೌಚಾಲಯ ಸೌಲಭ್ಯದ ಕೊರತೆ ಗ್ರಾಮದ ಮಹಿಳೆಯರನ್ನ ಕಾಡುತ್ತಿದೆ.

ವೈಯಕ್ತಿಕ ಶೌಚಾಲಯ ನಿರ್ಮಾಣ ಣ ಯೋಜನೆ ಸಂಪೂರ್ಣ ಯಶಸ್ಸಾಗಿಲ್ಲ. ಗ್ರಾಮದ ಬಹುತೇಕ ಗ್ರಾಮಸ್ಥರು ಸಾಮೂಹಿಕ ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ ಯಿಂದಾಗಿ ಗ್ರಾಮಸ್ಥರು ನಿತ್ಯ ನರಕ ಯಾತನೆಗಳನ್ನು ಅನುಭವಿಸುತ್ತಿದ್ದಾರೆ.

ಹೊಣೆಗೇಡಿಗಳು: ಗ್ರಾಮ ಪಂಚಾಯಿತಿ ಅಧಿಕಾರಿ ಸರ್ಕಾರಿ ಸಂಬಳ ಪಡೆದು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ. ಕೇವಲ ಜನಪ್ರತಿನಿಧಿಗಳ ಸೇವಕರಂತೆ ವರ್ತಿಸುತ್ತಿದ್ದಾರೆ. ಜನರ ಸೇವೆಯ ನೆಪದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು, ತಮ್ಮ ಕನಿಷ್ಠ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಬದಲಾಗಿ ಶೀಲು ಸೇನು ಜನಿಷನ್ ಗೆ ಮೀಸಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಸಾಂಕ್ರಾಮಿಕ ರೋಗಗಳದ್ದೇ ಕಾರುಬಾರು:ಇದು ಅವರ ಹೊಣೆಗೇಡಿತನ ಹಾಗೂ ಅಮಾನವೀಯತೆಗೆ ಸಾಕ್ಷಿ ಎಂದು ಹಿರಿಯರು ಹಾಗೂ ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಗಳೇ ಕೊಳಚೆ ತುಂಬಿದ ಕೆಸರುಗದ್ದೆಗಳಾಗಿ ಪರಿವರ್ತನೆಯಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಗ್ರಾಮದಲ್ಲಿ ತಾಂಡವಾಡುತ್ತಿವೆ. ಗ್ರಾಮದ ಜನತೆ ರೋಗ ಬಾಧೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದ್ದು,ಗಲ್ಲಿ ಗಲ್ಲಿಗಳು ಗಬ್ಬೆದ್ದು ನಾರುತ್ತಿವೆ ಹಾಗೂ ಸೊಳ್ಳೆ ಕಿಟಗಳ ಬಾಧೆ ಹೆಚ್ಚಾಗಿದೆ ಎಂದು ಗ್ರಾಮದ ಹಿರಿಯರು ದೂರಿದ್ದಾರೆ. ಶೀಘ್ರವೇ ಗ್ರಾಮದ ದುರಾವಸ್ಥೆ ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ, ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಾಪಂ ಮುತ್ತಿಗೆ ಹಾಕಲಾಗುವುದೆಂದು ಗ್ರಾಮದ ಹಿರಿಯರು ಹಾಗೂ ಕೆಲ ಮಹಿಳಾ ಸಂಘಗಳ ಪದಾಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು