ಇತ್ತೀಚಿನ ಸುದ್ದಿ
ಕಟ್ಟಡ ಕಾಮಗಾರಿಯಲ್ಲಿ ಲೋಪವಾದರೆ ಮಾಲೀಕ, ಇಂಜಿನಿಯರ್ ಮೇಲೆ ಕೇಸು: ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಎಚ್ಚರಿಕೆ
25/11/2024, 13:35
ಮಂಗಳೂರು(reporterkarnataka.com): ರಾಜ್ಯದ ಕೆಲವು ‘ನಗರಗಳಲ್ಲಿ ಪರವಾನಿಗೆ ಪಡೆಯದೇ/ಪರವಾನಿಗೆ ಪಡೆದು ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚುವರಿ ಕಟ್ಟಡ (ಮಹಡಿಗಳನ್ನು) ನಿರ್ಮಿಸಿ, ಕಟ್ಟಡವು ಕುಸಿದು ಅನೇಕ ಜನರ ಪ್ರಾಣಹಾನಿಯಾಗಿದ್ದು, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ನಡೆಸಿ ನುರಿತ ಇಂಜಿನಿಯರ್ ಗಳಿಂದ ವಿನ್ಯಾಸ ಪಡೆದು ಪಾಲಿಕೆಯಿಂದ ವಲಯ ನಿಯಮಾವಳಿ ಅನ್ವಯ ಕಟ್ಟಡ ಪರವಾನಿಗೆ ಪಡೆದು ವಿನ್ಯಾಸದಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ನಿಯಮಾನುಸಾರ ಕಟ್ಟಡವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ.
ಕಟ್ಟಡದ ಕಾಮಗಾರಿಯಲ್ಲಿ ಯಾವುದೇ ಲೋಪದೋಷವಾಗಿ ಕಟ್ಟಡಕ್ಕೆ ಯಾವುದೇ ಅಪಾಯವಾದಲ್ಲಿ ಅಥವಾ ಅನುಮೋದಿತ ನಕ್ಷೆ ಉಲ್ಲಂಘಿಸಿ ಹೆಚ್ಚುವರಿ ಮಹಡಿ ನಿರ್ಮಿಸಿ ಕಟ್ಟಡ ಕುಸಿದು ಯಾವುದೇ ಪ್ರಾಣಹಾನಿ ಸಂಭವಿಸಿದಲ್ಲಿ ಕಟ್ಟಡದ ಮಾಲೀಕರು, ಕಟ್ಟಡದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.