ಇತ್ತೀಚಿನ ಸುದ್ದಿ
ಕಟಪಾಡಿಯಲ್ಲಿ ಹೋಟೆಲ್ ಗೆ ನುಗ್ಗಿದ ಬಂಟಕಲ್ಲಿಗೆ ತೆರಳುತ್ತಿದ್ದ ಕಾರು: ಇಬ್ಬರಿಗೆ ಗಾಯ
19/08/2022, 09:39
ಉಡುಪಿ(reporterkarnataka.com):
ರಾಷ್ಟ್ರೀಯ ಹೆದ್ದಾರಿ ೬೬ರ ಕಟಪಾಡಿ ಸರ್ವೀಸ್ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ನುಗ್ಗಿದ್ದು, ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಮಹೀಂದ್ರಾ ಎಕ್ಸ್ ಯು ವಿ ಕಾರು ಉಡುಪಿ ಕಡೆಯಿಂದ ಬಂಟಕಲ್ಲುಗೆ ತೆರಳುವ ವೇಳೆ ಕಟಪಾಡಿ ಸರ್ವೀಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದು, ರಸ್ತೆಯ ಬದಿಯಲ್ಲಿದ್ದ ಹೋಟಿಗೆ ನುಗ್ಗಿದೆ. ಪರಿಣಾಮ ಹೋಟೆಲಿನ ಓರ್ವ ಸಿಬ್ಬಂದಿ ಹಾಗೂ ಇನ್ನೋರ್ವರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ರಾಯಲ್ ಹಟ್ ಹೋಟೆಲಿಗೆ ಅಪಾರ ನಷ್ಟ ಉಂಟಾಗಿದೆ. ಕಾಪು ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.