ಇತ್ತೀಚಿನ ಸುದ್ದಿ
ಖಾಸಗೀ ಶಾಲೆಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಸರಕಾರಕ್ಕಿಲ್ಲ: ರಾಜ್ಯ ಹೈಕೋರ್ಟ್ ತೀರ್ಫು
07/01/2023, 17:33

ಬೆಂಗಳೂರು(reporterkarnataka.com): ಖಾಸಗಿ ಶಾಲೆಗಳ ಶುಲ್ಕ ನಿಗದಿ ಪಡಿಸುವಂತ ಹಕ್ಕು ಸರಕಾರಕ್ಕಿಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷೆ ವಿಧಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.
ಹೀಗೆ ಶಿಕ್ಷೆ ವಿಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 2(11)ಎ ವಿಧಿಗೆ ವಿರುದ್ಧವಾಗಿದೆ. ಅಲ್ಲದೇ ಸಂವಿಧಾನದ 14ನೇ ವಿಧಿಯ ವಿರುದ್ಧವಾಗಿದೆ ಎಂಬುದಾಗಿ ತಿಳಿಸಿದೆ.
ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘನೆಗೆ ಶಿಕ್ಷೆ ಸಹ ಕಾನೂನು ಬಾಹಿರವಾಗಿದೆ ಎಂಬುದಾಗಿ ಹೇಳುವ ಮೂಲಕ ಖಾಸಗಿ ಅನುದಾನಿತ ಶಾಲೆಗಳಿಗೆ ಬಿಗ್ ರಿಲೀಫ್ ಹೈಕೋರ್ಟ್ ನೀಡಿದೆ.