5:24 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Kasaragod | ಸ್ನೇಹಾಲಯ ಹಾಗೂ ಜನಮೈತ್ರಿ ಪೊಲೀಸ್ ಸಂಘಟ: ಉಪ್ಪಳ ಮತ್ತು ಹೊಸಂಗಡಿಯಲ್ಲಿ ಡ್ರಗ್ ವಿರೋಧಿ ಜನಜಾಗೃತಿ ಕಾರ್ಯಕ್ರಮ

18/04/2025, 12:21

ಕಾಸರಗೋಡು(reporterkarnataka.com): ಸಮಾಜದೊಳಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಹಾಗೂ ಮಂಜೇಶ್ವರದ ಜನಮೈತ್ರಿ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಪ್ಪಳ ಹಾಗೂ ಹೊಸಂಗಡಿ ಬಸ್ ನಿಲ್ದಾಣಗಳಲ್ಲಿ ಭಾವಪೂರ್ಣ ಬೀದಿ ನಾಟಕ ಹಾಗೂ ಮೈಮ್ ಕಾರ್ಯಕ್ರಮಗಳು ಏರ್ಪಡಿಸಲ್ಪಟ್ಟವು.


ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳು, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದ ಮೇಲೆ ಬೀರುವ ಪರಿಣಾಮಗಳನ್ನು ಸ್ಪಷ್ಟವಾಗಿ ಸಾರ್ವಜನಿಕರಿಗೆ ಪರಿಚಯಿಸುವುದು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯಶಾಸ್ತ್ರ (MSW) ವಿದ್ಯಾರ್ಥಿಗಳು ಸ್ನೇಹಾಲಯ ತಂಡದೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಕಲಾತ್ಮಕವಾಗಿ ತಮ್ಮ ಸಂದೇಶವನ್ನು ಸಾರ್ವಜನಿಕರ ಮುಂದಿಟ್ಟು ಜನಮನ ಗೆದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯ ಅತಿಥಿಗಳಲ್ಲಿ ಕಾಸರಗೋಡು ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ (ಎಎಸ್ಪಿ) ಪಿ. ಬಾಲಕೃಷ್ಣ ನಾಯರ್, ಹೊಸದುರ್ಗ್ ಠಾಣೆಯ ವೃತ್ತ ನಿರೀಕ್ಷಕ (ಸಿ.ಐ) ಅಜಿತ್ ಕುಮಾರ್, ಮಂಜೇಶ್ವರ ಠಾಣೆಯ ಸಿ.ಐ ಅನುಪ್ ಹಾಗೂ ಸ್ನೇಹಾಲಯ ಡಿ ಅಡಿಕ್ಶನ್ ಕೇಂದ್ರದ ಕಾರ್ಯನಿರ್ವಾಹಕ, ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರು ಪ್ರಮುಖರಾಗಿ ಉಪಸ್ಥಿತರಿದ್ದರು.
ಸಂವಾದ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳು, ಕಾಸರಗೋಡು ಜಿಲ್ಲೆಯಲ್ಲಿನ ಮಾದಕವಸ್ತು ಬಳಕೆಯಲ್ಲಿರುವ ಯುವಜನತೆಗೆ ಸೂಕ್ತ ಚಿಕಿತ್ಸೆ ನೀಡಲು ಇರುವ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಸ್ನೇಹಾಲಯವು ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಅಮೋಘ ಸೇವೆಗಳಿಗೆ ಪ್ರಶಂಶೆ ಅರ್ಪಿಸಿದರು. ಜೊತೆಗೆ, ಇತ್ತೀಚೆಗೆ ಈ ಸಂಸ್ಥೆಯು ಸ್ಥಾಪಿಸಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಯುಕ್ತಗೊಂಡಿರುವ ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಕುರಿತು ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಮಾತನಾಡಿದ ಜೋಸೆಫ್ ಕ್ರಾಸ್ತಾ, ಸ್ನೇಹಾಲಯದಲ್ಲಿ ಲಭ್ಯವಿರುವ ವಿವಿಧ ಚಿಕಿತ್ಸೆ ವಿಧಾನಗಳು, ವೈಯಕ್ತಿಕ ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಕುಟುಂಬ ಜವಾಬ್ದಾರಿಗಳ ಜತೆಗೆ ಒಡನಾಡಿ ಬೆಳೆಸುವ ದಿಶೆಯ ಸೇವೆಗಳ ಬಗ್ಗೆ ವಿವರಿಸಿದರು. ಮಾದಕವಸ್ತುಗಳ ಮೋಹದಿಂದ ಮುಕ್ತವಾಗಿರುವ ಸಮುದಾಯ ನಿರ್ಮಾಣಕ್ಕೆ ಸ್ನೇಹಾಲಯ ತೊಡಗಿಸಿಕೊಂಡಿರುವ ನಿಷ್ಠೆ ಹಾಗೂ ಸೇವಾಭಾವನೆಗೆ ಅವರು ಬದ್ಧರಾಗಿರುವುದನ್ನು ಸ್ಪಷ್ಟಪಡಿಸಿದರು.
ಸಮಾರಂಭದ ಅಂತ್ಯದಲ್ಲಿ ಸಾರ್ವಜನಿಕರು, ಉದ್ಯೋಗಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ನೇಹಾಲಯ ತಂಡದ ಈ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮವನ್ನು ಶ್ರದ್ದೆಯಿಂದ ವೀಕ್ಷಿಸಿ ಎಲ್ಲಾ ಕಲಾವಿದರನ್ನು ತುಂಬು ಹ್ರದಯದಿಂದ ಅಭಿನಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು